ಸುದ್ದಿಗಳು

ದಿ ವಿಲನ್ ಚಿತ್ರಕ್ಕೆ ಎ ಸರ್ಟಿಫಿಕೇಟ್…

ಮಕ್ಕಳಿಗೆ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ..

ಸೆನ್ಸಾರ್ ಮಂಡಳಿಯಿಂದದಿ ವಿಲನ್ಚಿತ್ರಕ್ಕೆ ಸರ್ಟಿಫಿಕೇಟ್ ಲಭಿಸಿದೆ..

ಬೆಂಗಳೂರು,ಆ.30:ಸ್ಯಾಂಡಲ್ ವುಡ್ ನಲ್ಲಿ ಸದ್ಯ ಭಾರೀ ಹವಾ ಕ್ರಿಯೇಟ್ ಮಾಡಿರೋ ಚಿತ್ರ ದಿ ವಿಲನ್.. ಒಂದೆಡೆ ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳು ಚಿತ್ರ ಯಾವಾಗ ಬಿಡುಗಡೆ ಆಗುತ್ತೋ ಅಂತ ಕಾಯುತ್ತಾ ಇದ್ದರೆ ಮತ್ತೊಂದೆಡೆ ಪ್ರೇಮ್ ಅವರ ನಿರ್ದೇಶನ ಹೇಗ ತೆರೆ  ಮೇಲೆ ಯಶಸ್ಸು ಪಡೆಯುತ್ತೋ ಎಂದು ಜನ ಕಾದು ಕುಳಿತಿದ್ದಾರೆ..

Image result for the villain

ಸರ್ಟಿಫಿಕೇಟ್

ಇದರ ನಡುವೆ ಚಿತ್ರಕ್ಕೆ ದೊಡ್ಡ ತಲೆನೋವು ಎದುರಾಗಿದೆ. ಸೆನ್ಸಾರ್ ಮಂಡಳಿಯಿಂದ ‘ದಿ ವಿಲನ್ ‘ಚಿತ್ರಕ್ಕೆ ಎ ಸರ್ಟಿಫಿಕೇಟ್ ಲಭಿಸಿದೆ. ಇನ್ನೂ ಈ ಬಗ್ಗೆ ಮಾತನಾಡೋ ನಿರ್ದೇಶಕ ಪ್ರೇಮ್ ಎ ಸರ್ಟಿಫಿಕೇಟ್ ನೀಡಿರೋದರಿಂದ ಕೊಂಚ ಬೇಸರವಾಗಿದೆ. ಫೈಟ್ ಸೀಕ್ವೆನ್ಸ್ ಹೆಚ್ಚಾಗಿರೋದರಿಂದ ಎ ಸರ್ಟಿಫಿಕೇಟ್ ನೀಡಲಾಗಿದೆ. ಮಕ್ಕಳಿಗೆ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲದ್ದರಿಂದ ಫ್ಯಾಮಿಲಿ ಆಡಿಯನ್ಸ್ ಸಂಖ್ಯೆ ಕೊಂಚ ಕುಂಠಿತವಾಗಬಹುದು. ಆ ಭಯಪಡೋ ಅವಶ್ಯಕತೆ ಇಲ್ಲ ಶಿವಣ್ಣ ಹಾಗೂ ಕಿಚ್ಚನ ಅಭಿಮಾನಿಗಳು ಚಿತ್ರವನ್ನ ಗೆಲ್ಲಿಸುತ್ತಾರೆ ಅಂತಾರೆ ಪ್ರೇಮ್.

 

Tags