ಸುದ್ದಿಗಳು

ದಿ ವಿಲನ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆಯಂತೆ!!

ಬೆಂಗಳೂರು,ಸೆ.12: ದಿ ವಿಲನ್ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಬಹಳ ದಿನಿಗಳಿಂದ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾಯುತ್ತಿದ್ದಾರೆ.. ಆದರೆ, ಕಾರಣಾಂತರಗಳಿಂದ ಚಿತ್ರ ನಿಧಾನವಾಗುತ್ತಲೇ ಹೋಯಿತು.

ಯಾವಾಗ ಬಿಡುಗಡೆ?

ಈಗ ಚಿತ್ರಯಾವಾಗ ಬಿಡುಗಡೆಯಾಗುತ್ತೆ ಅಂತ ಕೇಳಿದರೆ, ಅಕ್ಟೋಬರ್ 18ಕ್ಕೆ ‘ದಿ ವಿಲನ್’ ಚಿತ್ರವನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಪ್ರೇಮ್ ನಿರ್ಧರಿಸಿದ್ದಾರಂತೆ ಎಂದು ಮೂಲಗಳು ಹೇಳುತ್ತಿವೆ.

ಸಿನಿಮಾ ಕರ್ನಾಟಕ ಮತ್ತು ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಅಕ್ಟೋಬರ್ ​​​​ನಲ್ಲಿ ಮುಂಗಡ ಬುಕ್ಕಿಂಗ್ ಕೂಡಾ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ‘ದಿ ವಿಲನ್’ ಸಿನಿಮಾವನ್ನು ಪ್ರೇಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿ.ಆರ್. ಮನೋಹರ್ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಶಿವರಾಜ್​​​ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ಮುಂತಾದವರು ನಟಿಸಿದ್ದಾರೆ.

 

Tags