ಸುದ್ದಿಗಳು

ಮರಾಠಿ ಪೇಪರ್ ನಲ್ಲಿ ದಿ-ವಿಲನ್ ಹವಾ ….!

ಮರಾಠಿ ಪೇಪರ್ ನಲ್ಲಿ ದಿ-ವಿಲನ್ ಹವಾ ....!

ಬೆಂಗಳೂರು,ನ,12: ದಸರಾ ವಾರಾಂತ್ಯದಲ್ಲಿ ಬಿಡುಗಡೆಗೊಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ ದಿ ವಿಲನ್ ‘ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜೋಗಿ ಪ್ರೇಮ್ ನಿರ್ದೇಶನದ “ದಿ-ವಿಲನ್” ….!

ದಿ ವಿಲನ್ ಚಿತ್ರ ಒಟ್ಟಾರೆ ಕಲೆಕ್ಷನ್ 70 ಕೋಟಿ ರೂ ಅಧಿಕ. ಸದ್ಯ ಪ್ರೇಮ್ ನಿರ್ದೇಶನದ ‘ ದಿ ವಿಲನ್’ ಹೊರ ರಾಜ್ಯಗಳಲ್ಲಿಯೂ ಬಿಡುಗಡೆಯಾಗಿದ್ದು, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ಹೆಚ್ಚಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಡ್ನಿ, ಮತ್ತಿತರ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಟ್ವೀಟರ್ ನಲ್ಲಿ ಸಂತಸ ಹಂಚಿಕೊಂಡ ಕಿಚ್ಚ ಸುದೀಪ್ ….!

ಇದೇ ಖುಷಿಯಲ್ಲಿ ಮರಾಠಿ ಪೇಪರ್ ನಲ್ಲಿ ಕನ್ನಡದ ಚಿತ್ರ ‘ದಿ ವಿಲನ್’ ಹವಾ ಜಾಸ್ತಿನೇ ಆಗಿದೆ. ಹೌದು, ದಿ ವಿಲನ್ ಅಷ್ಟರ ಮಟ್ಟಿಗೆ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.

ಸದ್ಯ ಮರಾಠಿ ಪೇಪರ್ ನಲ್ಲಿ ‘ದಿ ವಿಲನ್’ ಪೋಸ್ಟರ್ ರಾರಾಜಿಸುತ್ತಿದೆ. ಇದನ್ನು ಕಂಡು ಟ್ವೀಟರ್ ನಲ್ಲಿ ಸಂತಸ ಹಂಚಿಕೊಂಡ ಕಿಚ್ಚ ಸುದೀಪ್ ಗೆ ತುಂಬಾ ಖುಷಿಯಾಗಿದೆ.

Tags