ಸುದ್ದಿಗಳು

ಶಿವಣ್ಣನಿಗೆ ಕಣ್ಣು ಹಾಕಿದ ಆರು ಜನ ನಾಯಕಿಯರು…!!!

‘ದಿ ವಿಲನ್’ ಚಿತ್ರದಲ್ಲಿ ಶಿವಣ್ಣನಿಗೆ ವಿಶೇಷ ಹಾಡು

‘ದಿ ವಿಲನ್’ ಚಿತ್ರದಲ್ಲಿ ನಟ ಶಿವಣ್ಣನೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಶಾನ್ವಿ ಶ್ರೀವಾತ್ಸವ್, ಸಂಯುಕ್ತ ಹೊರನಾಡು, ಶ್ರದ್ದಾ ಶ್ರೀನಾಥ್ ಸೇರಿದಂತೆ ಹಲವು ನಟಿಯರಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ.

ಬೆಂಗಳೂರು, ಆ.28: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರವು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈಗ ಈ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಚಿತ್ರದಲ್ಲಿ ನಾಯಕ ಶಿವಣ್ಣನೊಂದಿಗೆ ನಾಯಕಿ ಆ್ಯಮಿಯೊಂದಿಗೆ ಒಟ್ಟು ಆರು ಜನ ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ.

ಆರು ಜನ ನಾಯಕಿಯರು

ಈಗಾಗಲೇ ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ಈ ಹಾಡಿನಲ್ಲಿ ಶಿವಣ್ಣನೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಶಾನ್ವಿ ಶ್ರೀವಾತ್ಸವ, ಸಂಯುಕ್ತ ಹೊರನಾಡು, ರಾಧಿಕಾ ಚೇತನ್ ಹಾಗೂ ಯು ಟರ್ನ್ ಶ್ರದ್ಧಾ ಶ್ರೀನಾಥ್ ಹೆಜ್ಜೆ ಹಾಕಿದ್ದಾರೆ.

ಚಿತ್ರದ ಹಾಡಿನಲ್ಲಿ ನಾಯಕನಿಗೆ ಹುಡುಗಿ ಹುಡುಕಾಟ ನಡೆಯುತ್ತಿರುತ್ತದೆ, ಯಾವ ಊರಿನ ಹುಡುಗಿ ಬೇಕು ಎಂಬಸಾಲು ಇಲ್ಲಿದ್ದು, ಇದರಲ್ಲಿ ಈ ಎಲ್ಲ ನಾಯಕಿಯರು ಬಂದು ಹೋಗಲಿದ್ದಾರೆ. ಮತ್ತು ಈ ಹಾಡು ಹಳ್ಳಿ ಸೊಗಡಿನಲ್ಲಿ ಮೂಡಿ ಬರಲಿದೆ.

ಪ್ರೇಮ್ಸ್ ಸಿನಿಮಾ

ನಿರ್ದೇಶಕ ಪ್ರೇಮ್ ಎಂದರೆ ಹೀಗೆ.. ಅವರ ಸಿನಿಮಾಗಳು ಅದ್ದೂರಿಯಾಗಿರುತ್ತವೆ. ಜೊತೆಗೆ ಚಿತ್ರದ ಹಾಡಿಗಾಗಿ ಪ್ರಸಿದ್ದ ನಾಯಕಿಯರನ್ನೂ ಕರೆ ತರುತ್ತಾರೆ. ಈ ಹಿಂದೆ ಮಲ್ಲಿಕಾ ಶರಾವತ್,ಯನಾ ಗುಪ್ತ, ಸನ್ನಿಲಿಯೋನ್ ಸೇರಿದಂತೆ ದೊಡ್ಡ ದೊಡ್ಡ ನಟಿಯರನ್ನು ಒಂದು ಹಾಡಿಗೆ ತಂದಿದ್ದರು. ಆದರೆ ಈ ಬಾರಿ ಕನ್ನಡದ ಆರು ನಾಯಕಿಯರನ್ನು ಒಂದು ಹಾಡಿನಲ್ಲಿ ಪ್ರೇಮ್ ಕುಣಿಸಿದ್ದಾರೆ.

ಸದ್ಯದಲ್ಲಿಯೇ ಚಿತ್ರ ಬಿಡುಗಡೆ

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಒಟ್ಟಿನಲ್ಲಿ ಶಿವಣ್ಣನ ಹವಾ ಮತ್ತೆ ಜೋರಾಗಿದೆ. ‘ಮಪ್ತಿ’, ‘ಟಗರು’ ಚಿತ್ರಗಳ ಯಶಸ್ಸಿನ ನಂತರ ಅಭಿಮಾನಿಗಳ ಕಣ್ಣು ಇದೀಗ ‘ದಿ ವಿಲನ್ ‘ ಮೇಲೆ ಬಿದ್ದಿದ್ದು, ಈಗಾಗಲೇ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

Tags