ಸುದ್ದಿಗಳು

ಅಂತೂ ಇಂತೂ ‘ದಿ ವಿಲನ್’ ಹಾಡುಗಳು ಹೊರ ಬಂದವು

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ‘ದಿ ವಿಲನ್’ ಚಿತ್ರದ ಧ್ವನಿಸುರುಳಿ ನಿನ್ನೆ ಬಿಡುಗಡೆಯಾಗಿದೆ. ಯಾವಾಗ ಬರುತ್ತೋ ಈ ಚಿತ್ರದ ಹಾಡುಗಳು ಅಂತಾ ಕಾದು ಕುಳಿತ್ತಿದ್ದ ಅಭಿಮಾನಿಗಳು ಇದೀಗ ಬಹಳ ಸಂತೋಷಗೊಂಡಿದ್ದಾರೆ.

ಬೆಂಗಳೂರು, ಆ. 20: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಒಟ್ಟಿಗೆ ನಟಿಸುತ್ತಿರುವ ‘ದಿ ವಿಲನ್’ ಅಂತ ಶೀರ್ಷಿಕೆ ಯಾವಾಗ ಹೊರ ಬಂತೋ, ಅಲ್ಲಿಂದ ಇಲ್ಲಿವರೆಗೂ ಸದಾ ಸುದ್ದಿಯಲ್ಲಿದೆ.

ನಿರೀಕ್ಷಿತ ಚಿತ್ರ

ಚಿತ್ರದಲ್ಲಿ ಇಬ್ಬರು ದೊಡ್ಡ ಕಲಾವಿದರಿದ್ದಾರೆ. ಅವರಲ್ಲಿ ಒಬ್ಬರು ಅಭಿನಯ ಚಕ್ರವರ್ತಿಯಾದರೆ ಇನ್ನೊಬ್ಬರು ಕರುನಾಡ ಚಕ್ರವರ್ತಿ.. ಈ ಇಬ್ಬರು ದೊಡ್ಡ ನಟರನ್ನ ಒಟ್ಟಿಗೆ ಸೇರಿಸಿ ಚಿತ್ರ ಮಾಡುತ್ತಿರುವುದು ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್.

ಹಾಡುಗಳು ಹೊರ ಬಂದವು

ಈ ಚಿತ್ರದ ಪ್ರತಿಯೊಂದು ಹಾಡುಗಳು ಹೊರ ಬಂದಾಗಲೂ ಕೂಡಾ ಈ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮ ಯಾವಾಗ ಆಗುತ್ತದೆ ಎಂಬ ಕುತೂಹಲವಿತ್ತು. ಇದೀಗ ನಿನ್ನೆ ಈ ಚಿತ್ರದ ಹಾಡುಗಳು ಹೊರ ಬಂದಿವೆ.

ಕಾರ್ಯಕ್ರಮದಲ್ಲಿ ಭಾಗಿಯಾದವರು

ಹೌದು, ನಿನ್ನೆ ಅದ್ದೂರಿ ಸೆಟ್ ನಲ್ಲಿ ‘ದಿ ವಿಲನ್’ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಡಾ. ಶಿವರಾಜ್ ಕುಮಾರ್, ಸುದೀಪ್, ಅಂಬರೀಷ್, ಪ್ರೇಮ್, ರಕ್ಷಿತಾ ಪ್ರೇಮ್, ತೆಲುಗಿನ ಶ್ರೀಕಾಂತ್ ಸೇರಿದಂತೆ, ಇಡೀ ‘ದಿ ವಿಲನ್’ ತಂಡ ಭಾಗಿಯಾಗಿತ್ತು.

Tags