ಸುದ್ದಿಗಳು

175 ನಿಮಿಷ ಅವಧಿ ಹೊಂದಿದೆ ‘ದಿ ವಿಲನ್’ ಸಿನಿಮಾ!!

'ಜೋಗಿ' ಚಿತ್ರ ಕೂಡಾ 2.50 ನಿಮಿಷ ಇತ್ತಂತೆ

ಬೆಂಗಳೂರು,ಸೆ.11: ಪ್ರೇಮ್‌ ನಿರ್ದೇಶನದ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ “ದಿ ವಿಲನ್‌’ ಅವಧಿಯನ್ನು ಎರಡು ಗಂಟೆ 55 ನಿಮಿಷಗಳಿಗೆ ಏರಿಸಿದ್ದಾರೆ. ‘ದಿ ವಿಲನ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರೇಮ್, ಗಣಪತಿ ಹಬ್ಬದಂದು ಘೋಷಿಸುವುದಾಗಿ ಹೇಳಿದ್ದಾರೆ.

175 ನಿಮಿಷ

ಹೌದು, ‘ದಿ ವಿಲನ್’ ಚಿತ್ರವು ಸೆನ್ಸಾರ್ ಆಗಿದ್ದು, ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಸೆನ್ಸಾರ್ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲಾತಾಣದಲ್ಲಿ ಪ್ರೇಮ್ ಹಂಚಿಕೊಂಡಿದ್ದಾರೆ. ಪ್ರಮಾಣ ಪತ್ರದಲ್ಲಿ  ಚಿತ್ರದ ಅವಧಿ 2 ಗಂಟೆ 55 ನಿಮಿಷ ಎಂದು ನಮೂದಿಸಲಾಗಿದೆ. ಅಬ್ಬಾ 2 ಗಂಟೆ 55 ನಿಮಿಷ ಎಂದು ಹುಬ್ಬು ಹಾರಿಸಬೇಡಿ. ಇಬ್ಬರು ನಟರಿಗೂ ಯಾವುದೇ ಕೊರತೆಯಾಗದಂತೆ ಸಿನಿಮಾ ಮಾಡುವುದಾಗಿ ಜೋಗಿ ಪ್ರೇಮ್ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಅತ್ಯಂತ ದೀರ್ಘಾವಧಿ ಸಿನಿಮಾ ‘ದಿ ವಿಲನ್’ ಆಗಲಿದೆ. ಈ ಹಿಂದೆ ಪ್ರೇಮ್ ನಿರ್ದೇಶನದ ‘ಜೋಗಿ’ ಚಿತ್ರ ಕೂಡಾ 2.50 ನಿಮಿಷ ಇತ್ತಂತೆ. ಆದರೆ ‘ದಿ ವಿಲನ್ ನಲ್ಲಿ ನಿಮಿಷ ಹೆಚ್ಚಾಗಿದೆ. ಇದಕ್ಕೆಪ್ರೇಮ್ ಕಾರಣ ಕೂಡ ಕೊಟ್ಟಿದ್ದಾರೆ, ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಸಾಕಷ್ಟು ಸನ್ನಿವೇಶಗಳಿವೆ. ಆದರೂ ತುಂಬಾ ವೇಗವಾಗಿ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ ಪ್ರೇಮ್.

ಈ ಚಿತ್ರದಲ್ಲಿ ಶಿವರಾಜಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಸಿ.ಆರ್.ಮನೋಹರ್ ಈ ಚಿತ್ರದ ನಿರ್ಮಾಪಕರು.  ಗಿರೀಶ್ ಗೌಡ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.

 

Tags

Related Articles