ಸುದ್ದಿಗಳು

ದರ್ಶನ್ ಹುಟ್ಟುಹಬ್ಬದಲ್ಲಿ ಗಮನಸೆಳೆದ ಈ ಪುಟ್ಟ ಮಕ್ಕಳು

ದಚ್ಚು - ಕಿಚ್ಚು ಎಂದ ಮಕ್ಕಳು

ಬೆಂಗಳೂರು, ಫೆ.16:

ದರ್ಶನ್ ಹಾಗೂ ಸುದೀಪ್ ಅತ್ಯಂತ ಆತ್ಮೀಯ ಗೆಳೆಯರಾಗಿದ್ದರು. ಆದರೆ ಯಾವದೋ ಒಂದು ಕಾರಣಕ್ಕೆ ಇಬ್ಬರು ಮಾತು ಬಿಟ್ಟಿರುವುದು ಕೂಡ ಗೊತ್ತಿರುವ ವಿಚಾರ. ನೇರವಾಗಿ ಇಬ್ಬರು ಮಾತನಾಡದಿದ್ದರೂ ಕೂಡ ಇಬ್ಬರ ಮನಸಲ್ಲೂ ಸ್ನೇಹ ಇದೆ ಅನ್ನೋದು ಹಲವಾರು ಅಭಿಮಾನಿಗಳ ಮಾತು. ಇದೀಗ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ.

ಪುಟ್ಟ ಅಭಿಮಾನಿಗಳಿಂದ ದರ್ಶನ್ ಗೆ ಸ್ಪೆಷಲ್ ಗಿಫ್ಟ್

ಹೌದು, ಇಂದು ದರ್ಶನ್ ಹುಟ್ಟುಹಬ್ಬ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರೂ ಅಭಿಮಾನಿಗಳಿಗೇನು ಕಡಿಮೆ ಇಲ್ಲ ಅನ್ನೋದು ಇವತ್ತು ದರ್ಶನ್ ಮನೆ ಮುಂದೆ ಕಂಡು ಬಂದ ದೃಶ್ಯ. ದರ್ಶನ್ ಮಾತಿನಂತೆ ಇಂದು ಯಾರೊಬ್ಬರು ಕೂಡ ಕೇಕ್ ತರದೇ ದರ್ಶನ್‌ ರ ದರ್ಶನ ಮಾಡಿದ್ದುಂಟು. ಆದರೆ ಇಲ್ಲಿಬ್ಬರು ಪುಟ್ಟ ಅಭಿಮಾನಿಗಳು ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

ಪೈಲ್ವಾನ್ – ಡಿ ಬಾಸ್ ಎಂದ ಮಕ್ಕಳು

ದರ್ಶನ್ ಹುಟ್ಟ ಹಬ್ಬಕ್ಕೆ ಹಾರೈಸಲು ಬಂದ  ಮಕ್ಕಳಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು. ವಿಶೇಷವೆಂದರೆ ಕಿಚ್ಚ – ದಚ್ಚುವಿನ ಸ್ನೇಹದ ನೆನಪು ಮಾಡಿದ್ರು ಈ ಪುಟ್ಟ ಅಭಿಮಾನಿಗಳು. ಅಭಿ ಪೈಲ್ವಾನ್ ಅಂತ ಬರೆದುಕೊಂಡಿದ್ರೆ, ಸಹನ ಡಿ ಬಾಸ್ ಅಂತ ಹಣೆ ಮೇಲೆ ಬರೆದುಕೊಂಡಿದ್ದಾರೆ. ಈ ಇಬ್ಬರು ಮಕ್ಕಳು ಹುಬ್ಬಳ್ಳಿ ಹಾಗೂ ಮೈಸೂರಿನ ಅಭಿಮಾನಿಗಳು. ಇನ್ನು ಅಭಿ ಹಾಗೂ ಸಹನ ಅನ್ನೋ ಮಕ್ಕಳ ಟ್ಯಾಟೋ ಗಮನ ಸೆಳೆದದ್ದು ವಿಶೇಷವಾಗಿತ್ತು.

ದರ್ಶನ್ ಬರ್ತಡೇಗೆ ಚಿರತೆಗಳನ್ನು ದತ್ತು ಪಡೆದ ಅಭಿಮಾನಿಗಳು

#darshanmovies #darshanfans #darshanandsudeep #balkaninews #kannadamovies #darshanbirthday

Tags

Related Articles