ಸುದ್ದಿಗಳು

‘ದಿ ವಿಲನ್’ ಬಿಡುಗಡೆಯ ಬಗ್ಗೆ ಉಂಟಾದ ಗೊಂದಲಗಳು..!!!

‘ಸಾರ್… ಸ್ವಲ್ಪ ವಿಷ ಇದ್ರೇ ಕೊಡ್ತಿರಾ..??’-ಎಂದಿದ್ದ ಅಭಿಮಾನಿಗಳು….!!!

ಯಾರನ್ನು ಎಲ್ಲಿ ಕೇಳಿದರೂ , ಎಲ್ಲಿ ನೋಡಿದರೂ ಒಂದೇ ಜಪ…! ಅದುವೇ ‘ ದಿ ವಿಲನ್’.. !! ಬನ್ನಿ..!, ಡಿಕೆ ನಿರ್ದೇಶಕ ಪ್ರೇಮ್ ಸಿನಿಮಾಗಳೆಂದರೆ ಹಾಗೇ… !! ಅಲ್ಲೊಂದು ಹೈಪ್ ಕ್ರಿಯೇಟ್ ಆಗಿರುತ್ತದೆ. ಈ ಚಿತ್ರದಲ್ಲಿ ಇಬ್ಬರು ಚಕ್ರವರ್ತಿಗಳಿದ್ದಾರೆ. ಹಾಗಿದ್ದ ಮೇಲೆ ಕೇಳಬೇಕೆ.. ದಿನದಿಂದ ದಿನಕ್ಕೆ ‘ದಿ ವಿಲನ್’ ಜ್ವರದ ಕಾವು ಏರುತ್ತಾ ಹೋಯಿತು.

ಯಾವಾಗ ಬರುತ್ತೆ..!

‘ಕಲಿ’ಯಲ್ಲಿ ನಟರಾದ ಶಿವಣ್ಣ ಹಾಗೂ ಸುದೀಪ್ ಒಂದಾಗಬೇಕಿತ್ತು. ಆದರೆ ಅದು ಸ್ವಲ್ಪ ಮುಂದಕ್ಕೆ ಹೋದ ನಂತರ ಶುರುವಾದದ್ದು ‘ದಿ ವಿಲನ್’.. ಈ ಸಿನಿಮಾ ಶುರುವಾಯಿತು.. ಈಗ ಬರುತ್ತದೆ ಆಗ ಬರುತ್ತದೆ ಎಂದು ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಸಿನಿಮಾಮಂದಿಯರೇ ಈ ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದೆಲ್ಲಾ ಸರಿ.. ಯಾವಾಗ ಬಿಡುಗಡೆ…???.. ಈ ಬಗ್ಗೆ ನಿರ್ದೇಶಕ ಪ್ರೇಮ್ ಅವರಿಗೂ ಗೊತ್ತಿರಲಿಲ್ಲ.

ಬಿಡುಗಡೆಯ ಬಗ್ಗೆ ಗೊಂದಲ

ಸಪ್ಟೆಂಬರ್ ತಿಂಗಳ ಗೌರಿ ಗಣೇಶ ಹಬ್ಬದಂದು ‘ದಿ ವಿಲನ್’ ಗ್ಯಾರಂಟಿ ಬರಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಭಿಮಾನಿಗಳಂತೂ ಈ ಸಿನಿಮಾವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಆದರೆ ಚಿತ್ರತಂಡ ನಿರಾಶೆ ಮಾಡಿತು. ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಿತು. ಕೆಲವು ಅಭಿಮಾನಿಗಳಂತೂ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು, ‘ಸಾರ್…

ಸ್ವಲ್ಪ ವಿಷ ಇದ್ರೇ ಕೊಡ್ತಿರಾ..??’ ಎಂದಿದ್ದರು.

 

 

ಪ್ರೇಮ್ ಚಿತ್ರಗಳೆಂದರೆ ಹಾಗೆ!!

ನಿರ್ದೇಶಕ ಪ್ರೇಮ್ ಸಿನಿಮಾಗಳನ್ನು ಬೇಗ ಮುಗಿಸುವುದಿಲ್ಲ ಎಂಬ ಮಾತಿದೆ. ಆದರೆ ಈ ಚಿತ್ರ ತಡವಾಗಲು ಅವರೇ ಈ ಎಲ್ಲಾ ಕಾರಣಗಳ ಹೇಳುತ್ತಾರೆ..ಕೇಳಿ.., “ ನಮ್ಮ ಚಿತ್ರದಲ್ಲಿ ಸಿ.ಜಿ ಕೆಲಸಗಳು ತುಂಬಾ ಇವೆ. ಜೊತೆಗೆ ಇಬ್ಬರು ನಾಯಕರ ಡೇಟ್ಸ್ ನೋಡಿಕೊ‍ಳ್ಳಬೇಕು. ಸಾಲದ್ದಕ್ಕೆ, ವಿದೇಶಿ ನಾಯಕಿ.. ಹೀಗಾಗಿ ತಡವಾಗುತ್ತಿದೆ’ ಎಂದಿದ್ದರು. ಅದರಂತೆ ಈ ವರ್ಷದ ವರಮಹಾಲಕ್ಷ್ಮಿ ಹಬ್ಬದಂದಾದರೂ ಬಿಡುಗಡೆ ಮಾಡಬಹುದಿತ್ತು. ಆದರೆ ಮತ್ತೆ ಬಿಡುಗಡೆಯ ದಿನವನ್ನು ಅ. 18 ಕ್ಕೆ ಮುಂದುಡಲಾಯಿತು.

 

ಪ್ರೇಮ್ ಗಿದೆಯಾ ಭಯ..??!

ಇಬ್ಬರು ಸ್ಟಾರ್ ನಟರು.. ಇಷ್ಟೇ ಸಾಕಲ್ಲವೇ… ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಲು.. ಆದರೆ ಈ ಸ್ಟಾರ್ ಕಾಸ್ಟ್ ನೋಡಿ ನಿರ್ದೇಶಕ ಪ್ರೇಮ್ ಗೆ ಭಯ ಕಾಡಿರಬಹುದು ಅನಿಸುತ್ತದೆ. ತುಸು ಹೆಚ್ಚು ಕಡಿಮೆಯಾದರೂ ಅವರೇ ಇಲ್ಲಿ ‘ದಿ ವಿಲನ್’ ಆಗಿ ಬಿಡುತ್ತಾರೆ. ಏನೇ ಹೇಳಿ.. ಗಟ್ಟಿ ಕಾಳುಗಳು ಉಳಿದುಕೊಂಡೇ ಉಳಿದುಕೊಳ್ಳುತ್ತವೆ. ಹೀಗಾಗಿ ಚಿತ್ರದಲ್ಲಿ ಇಬ್ಬರ ಅಭಿಮಾನಿಗಳನ್ನು ತೃಪ್ತಿಪಡಿಸುವ ಅಂಶಗಳು ಮತ್ತು ಮನರಂಜನೆಯ ಅಂಶಗಳು ಇದ್ದರೆ.. ಚಿತ್ರ ಖಂಡಿತ ಗೆಲ್ಲುತ್ತದೆ.. ಮತ್ತೊಮ್ಮೆ, ಚಿತ್ರ ಗೆಲ್ಲಲಿ.. ಸೂಪರ್ ಹಿಟ್ ಆಗಲಿ.. ಎಲ್ಲರನ್ನೂ ಮನರಂಜಿಸಲಿ ಎಂಬುದು ಬಾಲ್ಕನಿಯ ಆಶಯ..

Tags