ಸುದ್ದಿಗಳು

“ ಈ ಸಿನಿಮಾನ ಸಿನಿಮಾ ತರಹನೇ ನೋಡಿ…!?’’

“ದಿ ವಿಲನ್ “ ನೋಡಲು ನಾನೂ ಸಹ ಕಾತುರನಾಗಿದ್ದೇನೆ: ಕಿಚ್ಚ !!!!

‘ನಿರ್ದೇಶಕ ಪ್ರೇಮ್ ಮೊದಲಿನಿಂದಲೂ ನನಗೊತ್ತು. ಅವರು ಯಾವಾಗ್ಲೂ ಹೇಳ್ತಾ ಇದ್ರು, ಒಂದು ಸಿನಿಮಾ ಮಾಡೋಣಾ ಅಂತ. ಹೀಗೇ ನಾಲ್ಕು ವರ್ಷಗಳ ಹಿಂದೆ ‘ಕಲಿ’ ಬಗ್ಗೆ ಮಾತು-ಕಥೆಗಳು ಬಂದವು. ಆದರೆ ಅನಿವಾರ್ಯಗಳಿಂದ ಅದು ಮುಂದಕ್ಕೆ ಹೋಯ್ತು. ಆದರೇನಂತೆ ‘ದಿ ವಿಲನ್’ ಬರ್ತಿದೆಯಲ್ಲಾ.. ಆದರೆ ಒಂದು ಹೇಳ್ತಿನಿ.. ಬಿಗ್ ಕಾಂಬಿನೇಷನ್ ಅಂತ ತಿಳಿದ ತಕ್ಷಣ ಹೆಚ್ಚಿನ ಕಾತುರ ಬೇಡ , ಸಿನಿಮಾನ ಸಿನಿಮಾ ತರಹ ನೋಡಿ’ ಎಂದು ಕಿಚ್ಚ ಸುದೀಪ್ ಹೇಳುತ್ತಾರೆ.

ನಾನೇಕೆ ಒಪ್ಪಿಕೊಂಡೆ ಗೊತ್ತಾ…???

‘ಚಿತ್ರದಲ್ಲಿ ಒಳ್ಳೆಯ ಕಥೆಯಿದೆ. ಜೊತೆಗೆ ಲೆಜೆಂಡರಿ ನಟ ಶಿವಣ್ಣ, ದೊಡ್ಡ ನಿರ್ಮಾಪಕ ಸಿ. ಆರ್ ಮನೋಹರ್, ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್, ವಿದೇಶಿ ನಾಯಕಿ.. ಇಷ್ಟು ಸಾಕಲ್ಲವೇ.. ತೆರೆಯ ಮೇಲೆ ಮಲ್ಟಿಸ್ಟಾರರ್ ಸಿನಿಮಾಗಳನ್ನು ನೋಡಲು ನನಗೆ ರೋಮಾಂಚನವಾಗುತ್ತದೆ. ಒಂದೊಳ್ಳೆ ಕಾಂಬಿನೇಷನ್ ಇದೆ. ಹೀಗಾಗಿ ನಾನು ‘ದಿ ವಿಲನ್’ ನಲ್ಲಿ ನಟಿಸಿದ್ದೇನೆ” ಎನ್ನುವ ಸುದೀಪ್, ‘ಶಿವಣ್ಣನೊಂದಿಗೆ ಸಿನಿಮಾ ಮಾಡಿದ್ದು, ಮರೆಯಲಾರದ ವಿಶಿಷ್ಟ ಅನುಭವ’ ಎನ್ನುತ್ತಾರೆ.

ನಮ್ಮ ಸಿನಿಮಾ ಇತಿಹಾಸ ಸೃಷ್ಟಿಸಬೇಕು

‘ಖಂಡಿತ ನಮ್ಮ ಸಿನಿಮಾ ಮೈಲಿಗಲ್ಲಾಗಬೇಕು.. ನಿರ್ಮಾಪಕರು ಉಳಿಯಬೇಕು.. ಚಿತ್ರರಂಗದ ದಾಖಲೆಗಳನ್ನು ಸರಿಗಟ್ಟಬೇಕು” ಎಂದು ಕಿಚ್ಚ ಸುದೀಪ್ ಹೇಳುತ್ತಾ ನಡೆದರು.., ನಿರ್ದೇಶಕ ಪ್ರೇಮ್ ಬಗ್ಗೆ ಮತ್ತು ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಕೂಡಾ..!

‘ಹೋ… ಭ್ರಮೆ…’ ಎಂದು ಟ್ರೆಂಡ್-ಟ್ರೋಲಾದ ‘ದಿ ವಿಲನ್’ ಹೀರೊಗಳ ಉದ್ಘಾರಗಳು!

ಚಿತ್ರದ ಟೀಸರ್ ಹಾಗೂ ಪೋಸ್ಟರ್ ಅನ್ನು ನೋಡಿದಾಗ, ಕಿಚ್ಚ ಸುದೀಪ್ ವಿಭಿನ್ನವಾಗಿ ಕಂಡು ಬರುತ್ತಾರೆ. ಅವರ ಹೇರ್ ಸ್ಟೈಲ್, ನಗುತ್ತಿರುವ ಹಾಗೂ ಸಿಟ್ಟಾಗಿರುವ ಸ್ಟಿಲ್ಸ್ ಗಳು ಈಗಾಗಲೇ ಬಾರೀ ಕುತೂಹಲ ಸೃಷ್ಟಿಸಿವೆ. ಟೀಸರ್ ನಲ್ಲಿ ಅವರು ಹೇಳುವ ‘ಹೋ… ಭ್ರಮೆ…’ ಎಂಬ ಡೈಲಾಗ್ ಅಂತೂ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಜೊತೆಗೆ ಅವರ ಲುಕ್ ಚಿತ್ರಕ್ಕೊಂದು ಹೊಸದೇ ಆದ ಲುಕ್ ತಂದುಕೊಟ್ಟಿದೆ. ನೀವು ನೋಡಿ, ಬಾಲ್ಕನಿಗೆ ಕಾಲ್ ಮಾಡಿ, ನಿಮ್ಮ ಸಂತೋಷ, ಥ್ರಿಲ್, ಅನಿಸಿಕೆ –ಅಭಿಪ್ರಾಯ ಹಂಚಿಕೊಳ್ಳಿ.

Call: 8884444254

 

Tags