ಸುದ್ದಿಗಳು

ಯಶಸ್ವಿ 50 ದಿನ ಪೂರೈಸಿದ ‘ದಿ ವಿಲನ್’: ಅಭಿಮಾನಿಗಳಿಗೆ ಕಿಚ್ಚನ ಧನ್ಯವಾದ

50 ದಿನದಿಂದ 100 ನೇ ದಿನದತ್ತ ಸಾಗುತ್ತಿರುವ ಸಿನಿಮಾ

ಬೆಂಗಳೂರು, ಡಿ.6: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಇಂದು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ಸಿ. ಆರ್ ಮನೋಹರ್ ನಿರ್ಮಿಸಿದ್ದಾರೆ.

ದಾಖಲೆಯ ಕಲೆಕ್ಷನ್

ಈ ಚಿತ್ರ ಬಿಡುಗಡೆಯಾದ ಮೇಲೆ ಚಿತ್ರತಂಡದವರು ಮನವಿ ಮಾಡಿಕೊಂಡರೂ ಸಹ ಪೈರಸಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕೆಲವು ದೃಶ್ಯಗಳು ಹರಿದಾಡಿದ್ದವು. ಆದರೂ ಸಹ ಚಿತ್ರದ ಕಲೆಕ್ಷನ್ ಕಡಿಮೆಯಾಗಿಲ್ಲ. ಈಗಾಗಲೇ ಸುಮಾರು 50 ಕೋಟಿಗೂ ಹೆಚ್ಚಿನ ಸಂಪಾದನೆ ಮಾಡಿರುವ ಬಗ್ಗೆ ಸುದ್ದಿಯಾಗುತ್ತಿದೆ.

ತಾಯಿಯ ಸೆಂಟಿಮೆಂಟ್

ಇನ್ನು ನಿರ್ದೇಶಕ ಪ್ರೇಮ್ ಚಿತ್ರಗಳೆಂದರೆ ಅಲ್ಲಿ ತಾಯಿಯ ಸೆಂಟಿಮೆಂಟ್ ಇರಲೇ ಬೇಕು. ಹಾಗೆಯೇ ಈ ಚಿತ್ರದಲ್ಲೂ ಕೂಡಾ ಈ ಸಿನಿಮಾದಲ್ಲಿಯೂ ತಾಯಿ ಸೆಂಟಿಮೆಂಟ್ ಇಟ್ಟು ತೆರೆ ಮೇಲೆ ಅಚ್ಚುಕಟ್ಟಾಗಿ ಪ್ರದರ್ಶನ ಮಾಡಿದ್ದಾರೆ. ಚಿತ್ರದಲ್ಲಿ ಆ್ಯಮಿ ಜಾಕ್ಸನ್, ಶರತ್ ಲೋಹಿತಾಶ್ವ, ಮಂಡ್ಯ ರಮೇಶ್, ಕುರಿ ಪ್ರತಾಪ್, ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಕಿಚ್ಚನ ಟ್ವೀಟ್

ಅ.18 ರಂದು ಬಿಡುಗಡೆಯಾಗಿದ್ದ ‘ದಿ ವಿಲನ್’ ಇಂದು 50 ನೇ ದಿನವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

“ದಿ ವಿಲನ್ “ ಚಿತ್ರವನ್ನು ಪ್ರೀತಿಯಿಂದ ಬರ ಮಾಡಿಕೊಂಡ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದ. ನಿಮ್ಮ ಪ್ರೀತಿ ಹಾಗೂ ಸಪೋರ್ಟ್​ ನಿಂದ ಈ ಸಿನಿಮಾ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ, ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

Tags

Related Articles