ಸುದ್ದಿಗಳು

ಐ ಐಮ್ ವಿಲನ್, ದೇಖೋ ಇಂಡಿಯನ್: ‘ದಿ ವಿಲನ್’ ಫಸ್ಟ್ ಸಾಂಗ್ ಬಂತು ರೀ

ಶಿವಣ್ಣನ ಬರ್ತಡೆ ದಿನ ಬಿಡುಗಡೆಯಾಗುತ್ತೆ ಅಂತ ಹೇಳಿದ್ದ ದಿ ವಿಲನ್ ಚಿತ್ರದ ಫಸ್ಟ್ ಮೇಕಿಂಗ್  ಬಿಡುಗಡೆಯಾಗಿದೆ. ಇಂದು ಬೆಳಿಗ್ಗೆ 10 ಕ್ಕೆ ಆನಂದ್ ಆಡಿಯೋ ಕಂಪನಿಯಿಂದ ಈ ಚಿತ್ರದ ಮೇಕಿಂಗ್ ಲಿರಿಕಲ್ ವಿಡಿಯೋ ಸಾಂಗ್ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ರಿಲೀಸ್ ಆದ ಹತ್ತೇ ನಿಮಿಷಕ್ಕೆ ಚಿಂದಿ ಉಡಾಯಿಸುತ್ತಿದೆ.

ನಿರ್ದೇಶಕ ಜೋಗಿ ಪ್ರೇಮ್ ಬರೆದಿರುವ “ಐ ಐಮ್ ವಿಲನ್, ದೇಖೋ ಇಂಡಿಯನ್” ಎಂಬ ಸಾಲುಗಳ ಈ ಹಾಡನ್ನುಶಂಕರ್ ಮಹಾದೇವನ್ , ಪ್ರೇಮ್ ಹಾಗೂ ಸಂಗಡಿಗರು ಸೇರಿ ಹಾಡಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

ತಾನ್ವಿ ಶಾನ್ವಿ ಫಿಲ್ಮಸ್ ಬ್ಯಾನರ್ ನ ಅಡಿಯಲ್ಲಿ ದಿ ವಿಲನ್ ಚಿತ್ರವನ್ನು ಡಾ. ಸಿ.ವಿ ಮನೋಹರ್ ನಿರ್ಮಿಸಿದ್ದು, ಶಿವರಾಜ್ ಕುಮಾರ್, ಕಿಚ್ಚ ಸುದೀಪ್ , ಆ್ಯಮಿ ಜಾಕ್ಸನ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.

ಚಿತ್ರವು ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ಕಾರಣದಿಂದ ಸುದ್ದಿ ಮಾಡುತ್ತಲೇ ಬರುತ್ತಿರುವ ‘ದಿ ವಿಲನ್’ ಚಿತ್ರವು ಅತೀ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. ಎಲ್ಲವೂ ಅಂದುಕೊಂಡಂತಾದರೆ ಬರುವ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರ ತೆರೆಗೆ ಬರಲಿದೆ. ಅಲ್ಲಿಯವರಗೂ ಚಿತ್ರದ ಹಾಡುಗಳನ್ನು ಕೇಳಿ ಖುಷಿ ಪಡೋಣಾ.

 

@ ಸುನೀಲ ಜವಳಿ

Tags