ಸುದ್ದಿಗಳು

ಮುರಳಿ, ಆಶಿಕಾ ‘ಆಶಿಕಿ’

ಮದಗಜನಿಗೆ ಜೋಡಿ ಸಿಕ್ತು

ಅಯೋಗ್ಯ ಚಿತ್ರದ ಏನಮ್ಮಿ ಯಾಕಮ್ಮಿ ಹಾಡು ಯೂಟ್ಯೂಬ್ ವೀಕ್ಷಣೆಯಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೆಯನ್ನೇ ನಿರ್ಮಿಸಿದೆ..ಈ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ನಂತರ ಈಗ ಚಿತಮಂದಿರಗಳ ಮುಂದೆ ರೋರಿಂಗ್ ಸ್ಟಾರ್ ಮುರಳಿ ಅವರ ದೊಡ್ಡ ಕಟೌಟ್ ನಿರ್ಮಿಸಲು ಹೊರಟಿದ್ದಾರೆ..

ಅದು ಮದಗಜ ಚಿತ್ರದ ಮೂಲಕ. ತುಂಬಾ ಹಿಂದೆ ಟೈಗರ್ ಪ್ರಭಾಕರ್ ಮಿಸ್ಟರ್ ಮಹೇಶ್ ಕುಮಾರ್ ಎಂಬ ಚಿತ್ರದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು..ಈಗ ನಿರ್ದೇಶಕ ಮಹೇಶ್ ಕೂಡ ಮದಗಜ ಚಿತ್ರದ ಮೂಲ ಸ್ಟೈಲಿಶ್ ಚಿತ್ರದ ನಿರ್ದೇಶಕರಾಗುತ್ತಿದ್ದಾರೆ..

ಅಂದ ಹಾಗೆ ಒಂದು ಯಶಸ್ವಿ ಚಿತ್ರದ ನಂತರ ನಿಶಕನ ಜವಾಬ್ದಾರಿ ಹೆಚ್ಚುತ್ತದೆ..ಅದನ್ನು ಅರಿತಿರುವ ಮಹೇಶ್, ಗಜ ನಡೆದಿದ್ದೇ ಹಾದಿ ಆಗಬೇಕು ಎಂಬ ಉತ್ಸಾಹದೊಂದಿಗೆ ಮದಗಜ ಚಿತ್ರ ಮಾಡುತ್ತಿದ್ದಾರೆ..ಅದಕ್ಕೆ ಪೂರಕವಾಗಿ ಚಿತ್ರದ ಸ್ಟಾರ್ ಕಾಸ್ಟ್ ಕೂಡ ಇರಬೇಕು ಅನ್ನೋದು ಅವರ ಆಸೆ.

ಹಾಗಾಗಿ ಚಿತ್ರದ ನಾಯಕಿಯ ಆಯ್ಕೆಯಲ್ಲೂ ಮಹೇಶ್ ಮುತುವರ್ಜಿ ವಹಿಸಿದ್ದಾರೆ..ಮದಗಜ ಚಿತ್ರದಲ್ಲಿ ಮುರಳಿಯ ಜೊತೆ ಆಶಿಕಿ ನಡೆಸಲು ಸೂಕ್ತ ನಾಯಕಿಯ ತಲಾಶ್ ಮಾಡ್ತಾ ಇದ್ದ ಮಹೇಶ್ ನಿನ್ನೆ ಆಯ್ಕೆಯನ್ನು ಮಾಡಿ ಮುಗಿಸಿದ್ದರು..ಆದರೆ ಸಿನಿ ರಸಿಕರಿಗೆ ಒಂದಿಷ್ಟು ಕುತೂಹಲ ಇರಲಿ ಎಂಬ ಕಾರಣಕ್ಕೆ ನಾಯಕಿಯನ್ನು ಊಹಿಸುವ ಕೆಲಸ ಕೊಟ್ಟಿದ್ದರು..ಈಗ ವಿಶೇಷ ಎಂದರೆ ಬಾಲ್ಕನಿ ನ್ಯೂಸ್ ಮೂಲಕ ಚಿತ್ರದ ನಾಯಕಿಯ ಹೆಸರನ್ನು ಅನೌನ್ಸ್ ಮಾಡಿದ್ದಾರೆ ಮಹೇಶ್..

ಹೌದು, ಮದಗಜ ಚಿತ್ರದಲ್ಲಿ ಮುರಳಿ ಅವರ ಜೊತೆ ಆಶಿಕಿ ನಡೆಸುತ್ತಿರುವುದು ಜನಪ್ರಿಯ ನಾಯಕಿ ಆಶಿಕಾ ರಂಗನಾಥ್..ಈ ನಿಟ್ಟಿನಲ್ಲಿ ಬಾಲ್ಕನಿ ನ್ಯೂಸ್ ನಿಮಗಾಗಿ ಮದಗಜ ಚಿತ್ರದ ಆಶಿಕಾ ರಂಗನಾಥ್ ಅವರ exclusive ಫೋಟೋಗಳನ್ನು ಬಿಡುಗಡೆ ಮಾಡಿದೆ..ಈ ಮದಗಜ ಸ್ಪೆಷಲ್ ಫೋಟೋಗಳು ನಮ್ಮಲ್ಲಿ, ನಿಮಗಾಗಿ..

Editor in chief balkani news kannada : Hari Paraak

ಯೂ ಟ್ಯೂಬ್ ನಲ್ಲಿ ಮಿಂಚಿನ ಬಳ್ಳಿ.. ಹಾಡಿಂದೇ ಹವಾ..

#Balkaninewskannada #madagaja #srimuruli #aashikaranganath #sandalwoodmovies #mahesh

 

Tags