ವೈರಲ್ ನ್ಯೂಸ್ಸುದ್ದಿಗಳು

ಬೆಂಕಿಯಿಂದ ಕಾಪಾಡಿದ ಯುವಕನ ಮೇಲೆ ಕರಡಿಯ ಪ್ರೀತಿ: ವಿಡಿಯೋ ವೈರಲ್

ಕಾಡ್ಗಿಚ್ಚಿನಿಂದ ಆಸ್ಟ್ರೇಲಿಯಾದಲ್ಲಿ ಸಸ್ಯ ಸಂಕುಲದ ಜೊತೆ ಪ್ರಾಣಿ ಸಂಕುಲವು ಸುಟ್ಟು ಭಸ್ಮವಾಗುತ್ತಿದ್ದು, ಆತಂಕವನ್ನು ಸೃಷ್ಟಿಸಿದೆ. ಬೇಸಿಗೆಯ ಧಗೆಯಿಂದ ಒಣಗಿದ ಕುರುಚಲು ಕಾಡಿನ ಹುಲ್ಲು, ಪೊದೆಗಳಿಗೆ ಬೆಂಕಿ ಹತ್ತಿಕೊಂಡು ನಿಧಾನವಾಗಿ ಆಚರಿಸುತ್ತಾ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತಿದೆ.

ಅಂದ ಹಾಗೆ ಇಲ್ಲೊಂದು ಕರಡಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ, ಕಾಡಿನ ಬೆಂಕಿಯಿಂದ ಕರಡಿಯ ಮರಿಯನ್ನು ರಕ್ಷಿಸಿದ್ದು, ತನ್ನನ್ನು ರಕ್ಷಿಸಿದ ಆ ಯುವಕನ ಕಾಲುಗಳನ್ನು ಹಿಡಿದು ಆ ಮರಿಯು ಕೃತಜ್ಞತೆ ತಿಳಿಸುತ್ತದೆ.

ಜೂಲಿ ಮೇರಿ ಕ್ಯಾಪಿ ಎಲ್ಲೊ ಎಂಬುವವರು ಟ್ವೀಟರ್ ನಲ್ಲಿ 15 ಸೆಕೆಂಡ್ ನ ಈ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಈ ಕರಡಿ ಮರಿ ತನ್ನನ್ನು ಬಿಟ್ಟು ಹೋಗಬೇಡಾ ಎಂದು ಅಂಗಲಾಚುತ್ತಿರುವುದನ್ನು  ಕಾಣಬಹುದು. ಈ ಯುವಕ ಮತ್ತು ಆ ಪ್ರಾಣಿಯ ಪ್ರೀತಿಗೆ ನೆಟ್ಟಿಗರು ಮನಸೋತಿದ್ದು, ಮನುಷ್ಯರಂತೆ ಪ್ರಾಣಿಗಳಿಗೂ ಸಹ ಹೃದಯವಿದೆ ಎನ್ನುತ್ತಿದ್ದಾರೆ.

ಕೆಲವು ಜನರಿಗೆ ಬೇರೆಯವರ ಜಗಳ ನೋಡುವುದಂದ್ರೆ ಸಖತ್ ಖುಷಿ: ವಿಡಿಯೋ ವೈರಲ್

#Australia #AustraliaFire #BearLove,

Tags