ಸುದ್ದಿಗಳು

ಈ ಜೋಡಿ ತಾರೆಯರು ಒಡಹುಟ್ಟಿದವರು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ..!

ಮುಂಬೈ, ಏ.23:

ಬಾಲಿವುಡ್ ನಲ್ಲಿರುವ ಈ ನಟ, ನಟಿಯರ ಬಗ್ಗೆ ನಿಮಗೆ ಗೊತ್ತು. ಇವರು ನಟಿಸಿದ ಸಿನಿಮಾಗಳನ್ನು ನೀವು ನೋಡಿದ್ದೀರಿ.  ಆದರೆ ನಿಮಗೆ ಗೊತ್ತಿರದ ಇನ್ನೊಂದು ಸಂಗತಿ ಇದೆ. ಈ 5 ಜೋಡಿ ತಾರೆಯರು ಒಡಹುಟ್ಟಿದವರು ಅನ್ನುವುದು ನಿಮಗೆ ಗೊತ್ತಿಲ್ಲ.

ಇಮ್ರಾನ್ ಹಶ್ಮಿ ಮತ್ತು ಆಲಿಯಾ ಭಟ್

ಇಮ್ರಾನ್ ಹಶ್ಮಿ ಮತ್ತು ಆಲಿಯಾ ಭಟ್  ಸಂಬಂಧದಲ್ಲಿ ಸಹೋದರ ಮತ್ತು ಸಹೋದರಿಯರು. ಆಲಿಯಾ ಭಟ್ ತಂದೆ ಮಹೇಶ್ ಭಟ್, ಇಮ್ರಾನ್ ಹಶ್ಮಿಯ ತಾಯಿಯ ಚಿಕ್ಕಪ್ಪ. ಇಮ್ರಾನ್ ಹಶ್ಮಿ ಮಹೇಶ್ ಭಟ್ ನಿರ್ದೇಶಿಸಿದ ಚಲನಚಿತ್ರ ‘ಫುಟ್ ಪಾತ್’ ಚಿತ್ರದ ಮೂಲಕ ತನ್ನ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.  ಇಲ್ಲಿಯವರೆಗೆ ಆಲಿಯಾ ಭಟ್ ಮತ್ತು ಇಮ್ರಾನ್ ಹಶ್ಮಿ ಯಾವುದೇ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಂಡಿಲ್ಲ.

Image result for emraan hashmi and alia bhatt

ಸೋನು ಸೂದ್ ಮತ್ತು ಐಶ್ವರ್ಯಾ ರೈ

ಇವರಿಬ್ಬರು ಸಂಬಂಧದಲ್ಲಿ ಸಹೋದರ ಮತ್ತು ಸಹೋದರಿಯರು.‌ ನಟ ಸೋನು ಸೂದ್ ‘ವಿಲನ್’ ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ಇದೇ ವೇಳೆ ಐಶ್ವರ್ಯ ರೈ ಮಿಸ್ ವರ್ಲ್ಡ್ ನಲ್ಲಿ ಫೇಮಸ್ ಆಗಿದ್ದರು. ಜೋಧಾ-ಅಕ್ಬರ್ ಸಿನಿಮಾದಲ್ಲಿ ಸೋನು ಸೂದ್ ಮತ್ತು ಐಶ್ವರ್ಯಾ ರೈ   ಸಹೋದರ – ಸಹೋದರಿ ಪಾತ್ರದಲ್ಲಿ ನಟಿಸಿದ್ದರು.

Image result for sonu sood and aishwarya rai

ಮೋಹಿನಿಶ್ ಬಹ್ಲ್ ಮತ್ತು ಕಾಜೊಲ್

‘ಹಮ್ ಸಾಥ್ ಸಾಥ್ ಹೇ’ ಚಿತ್ರದಲ್ಲಿ ಮೋಹಿನಿಶ್ ಬಹ್ಲ್ , ಸಲ್ಮಾನ್ ಖಾನ್ ರ ಹಿರಿಯ ಸಹೋದರ ಮತ್ತು ಕಾಜೋಲ್‌ ರ ಸಹೋದರನ ಪಾತ್ರದಲ್ಲಿ ನಟಿಸಿದ್ದರು. ಮೋನಿಶ್ ಬಹ್ಲ್ ರ ತಾಯಿ ನೂತನ್ ಮತ್ತು ಕಾಜೋಲ್ ರ ತಾಯಿ ತನುಜಾ ಸಹೋದರಿಯಾಗಿದ್ದಾರೆ.

ರಣ್ವೀರ್ ಸಿಂಗ್ ಮತ್ತು ಸೋನಮ್ ಕಪೂರ್

ಸೋನಮ್ ಕಪೂರ್ , ಅನಿಲ್ ಕಪೂರ್ ರ ಪುತ್ರಿ. ಈ ವರ್ಷದ ಸೋನಂ ನಟನೆಯ  ‘ಅಲಿ ಬಾಯ್ ‘ ನಂತಹ ಬ್ಲಾಕ್ಬಸ್ಟರ್ ಚಿತ್ರ ಸಹೋದರ ಮತ್ತು ಸಹೋದರಿಗೆ ಸಂಬಂಧಿಸಿದ್ದು. ವಾಸ್ತವವಾಗಿ ಸೋನಮ್ ಕಪೂರ್ ಅಜ್ಜಿ ಮತ್ತು ರಣ್ವೀರ್ ಸಿಂಗ್ ರ ಅಜ್ಜಿ ಸಹೋದರಿಯಾಗಿದ್ದಾರೆ. ಬಹುಶಃ ರಣ್ವೀರ್ ಸಿಂಗ್ ಮತ್ತು ಸೋನಮ್ ಕಪೂರ್ ಈವರೆಗೆ ಯಾವುದೇ ಚಿತ್ರದಲ್ಲಿ ಜತೆಯಾಗಿ ಅಭಿನಯಿಸಲಿಲ್ಲ.

Image result for ranveer singh and sonam kapoor

ಅರ್ಜುನ್ ಕಪೂರ್ ಮತ್ತು ಕತ್ರಿನಾ ಕೈಫ್

ಬಾಲಿವುಡ್ ನಟಿ ಅರ್ಜುನ್ ಕಪೂರ್ ಮತ್ತು ಖ್ಯಾತ ನಟಿ ಕತ್ರಿನಾ ಕೈಫ್ ‘ಇಷ್ಕ್ ಜಾದೆ’  ಚಿತ್ರದಲ್ಲಿ ಸಹೋದರ ಮತ್ತು ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ವಾಸ್ತವವಾಗಿ, ಅರ್ಜುನ್ ಕಪೂರ್ ಬಾಲಿವುಡ್ ಗೆ ಬಂದಾಗ ಕತ್ರಿನಾ ಕೈಫ್ ತನ್ನ ಸಹೋದರನೆಂದು ಪರಿಗಣಿಸಿದ್ದರು. ಅರ್ಜುನ್ ಕಪೂರ್ ಸಹ ಕತ್ರಿನಾ ಕೈಫ್ ತನ್ನ ನಿಜವಾದ ಸಹೋದರಿ ಎಂದು ಪರಿಗಣಿಸಿದ್ದಾರೆ.

Related image

ಮುಂಬೈನಲ್ಲಿಯೇ ಶುರುವಾದ ಸಿನಿಮಾ ಇದೀಗ ಮುಂಬೈನಲ್ಲಿಯೇ ಅಂತ್ಯ

#balkaninews #bollywood #arjunkapoorandkatrinakaif #hindimovies #ranveersinghandsonamkapoor

Tags