ಸುದ್ದಿಗಳು

‘ಸಾಹೋ’ ಪೋಸ್ಟ್ ಪೋನ್ ಆಗುವುದು ಈ ಸ್ಟಾರ್ ನಟನಿಗೆ ಮೊದಲೇ ಗೊತ್ತಿತ್ತಂತೆ!?

‘ಸಾಹೋ’ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿರುವುದು ಯಾವ ಚಿತ್ರಕ್ಕೆ ಅನುಕೂಲವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಚಿತ್ರಕ್ಕೆ ಮಾತ್ರ ಖಂಡಿತ ಅನುಕೂಲವಾಗಿದೆ ಎನ್ನುತ್ತಿವೆ ಮೂಲಗಳು. ಒಂದು ವೇಳೆ ನಿಮ್ಮ ಊಹೆ ನಾಗಾರ್ಜುನ್ ಅಭಿನಯದ ಮನ್ಮಥುಡು-2 ಆಗಿದ್ದರೆ ಅದು ನಿಜ.

ಯಾಕೆಂದರೆ ಸ್ವತಃ ನಾಗರ್ಜುನ್ ಚಿತ್ರವನ್ನು ಆಗಸ್ಟ್ 9 ಕ್ಕೆ ಬಿಡುಗಡೆ ಮಾಡೋಣ ಎಂದಾಗ, ಇವರಿಗೇನಾಗಿದೆ? ನಂತರದ ವಾರದಲ್ಲಿ ‘ಸಾಹೋ’ ಬಿಡುಗಡೆಯಾದರೆ ನಮ್ಮ ಚಿತ್ರಕ್ಕೆ ಪೆಟ್ಟು ಬೀಳುತ್ತದೆ ಎಂದು ಸಲಹೆ ನೀಡಿದ್ದರಂತೆ. ಆದರೆ ಇವರು ಮಾತ್ರ ಅಂದೇ ಮಾಡಿ ಎಂದು ಧೃಡವಾಗಿ ಹೇಳಿದ್ದರಂತೆ.

ಕೆಲವರ ಪ್ರಕಾರ ನಾಗಾರ್ಜುನ್ ಗೆ ಸಾಹೋ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತದೆ ಎಂಬುದು ಸ್ವಲ್ಪ ಮೊದಲೇ ಗೊತ್ತಿತ್ತಂತೆ. ಆದ್ದರಿಂದ ಅವರೇನು ಮೊದಲು ಅಂದುಕೊಂಡಿದ್ದರೋ ಹಾಗೆಯೇ ಮನ್ಮಥುಡು-2 ಚಿತ್ರವನ್ನು ಆಗಸ್ಟ್ 9 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.

Image result for manmadhudu 2

ಬಹಳಷ್ಟು ಜನ ವಿತರಕರು ಬಂದು ನಾಗರ್ಜುನ್ ಗೆ ತಮ್ಮ ಚಿತ್ರದ ದಿನಾಂಕವನ್ನು ಮುಂದಕ್ಕೆ ಹಾಕಿ ಅಂದರೂ ಯಾವಾಗ ನಾಗಾರ್ಜುನ್ ಒಪ್ಪಲಿಲ್ಲವೋ ಅಂದೇ ಬಹಳಷ್ಟು ಜನರಿಗೆ ಇವರಿಗೆ ಸುಳಿವು ಸಿಕ್ಕಿತ್ತಂತೆ. ಇವರಿಗೆ ಸಾಹೋ ಬಿಡುಗಡೆಯ ದಿನಾಂಕ ಗೊತ್ತಿರಬಹುದೆಂದು. ಅಂದಹಾಗೆ ಇದೇ ಸಮಯಕ್ಕೆ ಅಂದರೆ ಆಗಸ್ಟ್ 15ರಂದು ‘ರಣರಂಗಂ’, ‘ಎವರು’ ಬಿಡುಗಡೆಯಾಗುತ್ತಿದ್ದು, ಈ ಎರಡು ಚಿತ್ರಗಳ ಜೊತೆ ನಾಗರ್ಜುನ್ ಸ್ಪರ್ಧೆ ಮಾಡಬೇಕಿದೆ.

ಬೆಳ್ಳಂಬೆಳಗ್ಗೆ ನಿರಾಶರಾದ ಅಮಲಾ ಪೌಲ್ ಅಭಿಮಾನಿಗಳು!

#balkaninews #nagarjunaakkineni #saaho #manmadhudu 2

Tags