ಸುದ್ದಿಗಳು

ಗುರುವಾರವೇ ‘ದರ್ಶನ’ ನೀಡುತ್ತಿರುವ ಈ ವಾರದ ಹೊಸ ಸಿನಿಮಾಗಳು

ನಾಲ್ಕು ಚಿತ್ರಗಳು ಬಿಡುಗಡೆ: ಈ ವಾರ

ಸ್ಯಾಂಡಲ್ ವುಡ್ ನಲ್ಲಿ ಪ್ರತಿವಾರ ಒಂದಲ್ಲಾ ಒಂದು ಸಿನಿಮಾಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅದರಂತೆ ಈ ವಾರವೂ ಸಹ ಒಟ್ಟು ನಾಲ್ಕು ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲು ಸಿದ್ದವಾಗಿವೆ. ವಿಶೇಷವೆಂದರೆ, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗುರುವಾರವೇ 3 ಸಿನಿಮಾಗಳು ತೆರೆಗೆ ಬರುತ್ತಿವೆ.

ಹೌದು, ಈ ವಾರ ಹೊಸಬರ ಚಿತ್ರಗಳೊಂದಿಗೆ ‘ಅನುಭವಿ’ ನಾಯಕನಟರ ಚಿತ್ರಗಳು ಸಹ ತೆರೆಗೆ ಬರುತ್ತಿರುವುದು ವಿಶೇಷ. ಈ ವಾರ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಒನ್ ಲವ್ 2 ಸ್ಟೋರಿ’, ‘ಗಿಮಿಕ್’ ಹಾಗೂ ‘ಮನಸ್ಸಿನಾಟ’ ಚಿತ್ರಗಳು ಬಿಡುಗಡೆಗೊಳ್ಳುತ್ತಿರುವ ಸಿನಿಮಾಗಳು.

1 ಗುಬ್ಬಿ ಮೇಲೆ ಬ್ರಹ್ಮಾಸ್ತ್ರ: ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ ಶೆಟ್ಟಿ, ಕವಿತಾ ಗೌಡ ನಟಿಸಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಿಸಲಾಗಿದ್ದು, ಸುಜಯ್ ಶಾಸ್ತ್ರಿ ನಿರ್ದೇಶನವಿದೆ.

2 ಗಿಮಿಕ್: ಇಷ್ಟು ದಿನಗಳ ಲವರ್ ಬಾಯ್ ಆಗಿ ನಟಿಸುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ಹಾರರ್ ಚಿತ್ರದ ಮೂಲಕ ಭಯಪಡಿಸಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಶೋಭರಾಜ್, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದು, ನಾಗಣ್ಣ ನಿರ್ದೇಶನ ಮಾಡಿದ್ದಾರೆ.

3 ಒನ್ ಲವ್ 2 ಸ್ಟೋರಿ: ಇದೊಂದು ಸಂಪೂರ್ಣ ಹೊಸಬರ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ಸಂತೋಷ್ , ಮಧು, ಆಧ‍್ಯಾ ಆರಾಧನ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ವಸಿಷ್ಠ ಬಂಟನೂರು ನಿರ್ದೇಶನ ಮಾಡಿರುವುದರೊಂದಿಗೆ ಚಿತ್ರದಲ್ಲೂ ನಟಿಸಿದ್ದಾರೆ.

4 ಮನಸ್ಸಿನಾಟ: ಆರ್, ರವೀಂದ್ರ ನಿರ್ದೇಶನದ ಈ ಚಿತ್ರವು ಸಾಮಾಜಿಕ ಜಾಲತಾಣದಿಂದ ಮಕ್ಕಳ ಮನಸ್ಸಿನ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತೋರಿಸುತ್ತದೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಸೇರಿದಂತೆ ಮಾಸ್ಟರ್ ಹರ್ಷಿತ್, ಯಮುನಾ ಶ್ರೀನಿಧಿ, ಪ್ರೀತಿಕಾ ಸೇರಿದಂತೆ ಅನೇಕರು ನಟಿಸಿದ್ದಾರೆ.

ಅಂದ ಹಾಗೆ ಉಳಿದೆಲ್ಲಾ ಸಿನಿಮಾಗಳು ಗುರುವಾರವೇ ತೆರೆಗೆ ಬಂದರೆ, ‘ಮನಸ್ಸಿನಾಟ’ ಚಿತ್ರವು ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಎಲ್ಲಾ ಚಿತ್ರತಂಡದವರಿಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಬಿಡುಗಡೆಗೂ ಮುನ್ನವೇ ತೆಲುಗು ಮಲಯಾಳಂ ನಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ರಿಮೇಕ್

#thisweek #15thaugust #releasedmovies #gimmik, #onelove2story, #manassinata, #gubbimelebrahmastra

Tags