ಸುದ್ದಿಗಳು

ಡಬ್ಬಿಂಗ್ ಚಿತ್ರದೊಂದಿಗೆ ಒಟ್ಟು ಆರು ಚಿತ್ರಗಳು ಬಿಡುಗಡೆ: ಈ ವಾರ

ಒಂದಲ್ಲಾ ಒಂದು ಕಾರಣಗಳಿಂದ ಕುತೂಹಲ ಮೂಡಿಸಿರುವ ಸಿನಿಮಾಗಳು

ಬೆಂಗಳೂರು.ಮಾ.07: ಸ್ಯಾಂಡಲ್ ವುಡ್ ನಲ್ಲಿ ಪ್ರತಿವಾರ ಒಂದಲ್ಲಾ ಒಂದು ಸಿನಿಮಾಗಳು ರಿಲೀಸ್ ಆಗುತ್ತವೆ. ಅದೇ ರೀತಿ ಈ ವಾರ ಒಟ್ಟು ಆರು ಚಿತ್ರಗಳು ತೆರೆ ಕಾಣುತ್ತಿವೆ. ಅವುಗಳಲ್ಲಿ ಒಂದು ಡಬ್ಬಿಂಗ್ ಚಿತ್ರವೆನ್ನುವುದು ಸಹ ವಿಶೇಷ. ಹೌದು, ಕಳೆದ ವಾರ ‘ಯಜಮಾನ’ ಒಂದೇ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ ಈ ವಾರ ಒಟ್ಟು 5 ಚಿತ್ರಗಳು ತೆರೆಗೆ ಬರಲು ಚಿತ್ರಮಂದಿರಕ್ಕೆ ಬರುತ್ತಿವೆ.

ರಾಘವೇಂದ್ರ ರಾಜ್ ಕುಮಾರ್ ನಟನೆಯ ‘ಅಮ್ಮನ ಮನೆ’,’ಒಂದ್ ಕಥೆ ಹೇಳ್ಲಾ’, ‘ಗೋಸಿ ಗ್ಯಾಂಗ್’, ‘ಮದ್ವೆ’, ‘ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ’ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಾಗಿದ್ದು, ಇವುಗಳ ಜೊತೆಗೆ ತಮಿಳಿನ ‘ವಿಶ್ವಾಸಂ’ ಡಬ್ ಆಗಿ ‘ಜಗಮಲ್ಲ’ ಹೆಸರಿನಲ್ಲಿ ಕನ್ನಡಕ್ಕೆ ಬರುತ್ತಿದೆ.

1 ಅಮ್ಮನ ಮನೆ : ಸುಮಾರು 14 ವರ್ಷಗಳ ನಂತರ ನಟ ರಾಘವೇಂದ್ರ ರಾಜ್ಕುಮಾರ್ ಸ್ಯಾಂಡಲ್ ವುಡ್ ಗೆ ಈ ಚಿತ್ರದ ಮೂಲಕ ಪ್ರವೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ನಿಖಿಲ್ ಮಂಜು. ಇಲ್ಲಿ ತಾಯಿ, ಮಗನ ಹಾಗೂ ಕುಟುಂಬದ ನಡುವಿನ ಬಾಂಧವ್ಯದ ಎಳೆಯನ್ನು ತೋರಿಸಲಾಗಿದೆ. ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಬಿ ಶಿವಾನಂದ ಸಂಭಾಷಣೆ, ಪಿವಿಆರ್ ಸ್ವಾಮಿ ಛಾಯಾಗ್ರಹಣ ಮತ್ತು ಸಮೀರ್ ಕುಲಕರ್ಣಿ ಸಂಗೀತ ಸಂಯೋಜನೆಯಿದೆ.

2 ಒಂದ್ ಕಥೆ ಹೇಳ್ಲಾ: ಇದೊಂದು ಹಾರರ್ ಚಿತ್ರವಾಗಿದ್ದು, ಮುಖ್ಯ ಕಥೆಯಲ್ಲಿ 5 ಉಪಕಥೆಗಳಿವೆ. ಚಿತ್ರದಲ್ಲಿ ಬರುವ ಪ್ರಮುಖ ಐದು ಪಾತ್ರಧಾರಿಗಳು ರೋಡ್ ಟ್ರೀಪ್ನೊಂದಿಗೆ ಪ್ರಾರಂಭವಾಗಿ ಸಕಲೇಶ್ ಪುರದ ಹೋಂ ಸ್ಟೇ ಒಂದನ್ನು ತಲುಪಿ ಹಲವು ವಿಭಿನ್ನ ತಿರುವುಗಳ ಮೂಲಕ ಕೊನೆಗೊಳ್ಳುತ್ತದೆ ಎನ್ನುವ ಒಂದು ಎಳೆ ಇಲ್ಲಿದೆ. ಚಿತ್ರದಲ್ಲಿ ತಾಂಡವ್ ರಾಮ್, ಶಕ್ತಿ ಸೋಮಣ್ಣ, ಪ್ರತೀಕ್, ಪ್ರಣತಿ, ತಾರಾ, ಪ್ರಿಯಾಂಕ್, ರಮಾಕಾಂತ್ ಹಾಗೂ ಸೌಮ್ಯ ರಮಾಕಾಂತ್ ಹಾಗೂ ಕಾರ್ತಿಕ್ ರಾವ್, ಸೇರಿದಂತೆ ಹಲವಾರು ಮಂದಿಯ ತಾರಾಗಣವಿದ್ದು, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಗಿರೀಶ್.

3 ಗೋಸಿ ಗ್ಯಾಂಗ್: ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿರುವವರು ಕೆ.ಶಿವಕುಮಾರ್ . ಈ ಚಿತ್ರವನ್ನುರಾಜು ದೇವಸಂದ್ರ ನಿರ್ದೇಶನ ಮಾಡಿದ್ದು, ಡ್ರಗ್ಸ್ ಮಾಫಿಯಾ ಸುತ್ತ ಸುತ್ತಲಿದೆ. ಚಿತ್ರದಲ್ಲಿ ಯತಿರಾಜ್ ಜಗ್ಗೇಶ್ ಹಾಗೂ ಅಜಯ್ ಕಾರ್ತಿಕ್ ನಟಿಸಿದ್ದಾರೆ. ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕ, ಅನುಷಾ, ಸೋನು ಪಾಟೀಲ್, ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದಾರ್, ಬ್ಯಾಂಕ್ ಜನಾರ್ದನ್, ಮೈಕೆಲ್ ಮಧು, ಸುಚಿತ್ರ, ಕಾವ್ಯ ಪ್ರಕಾಶ ಸೇರಿದಂತೆ ಇತರರು ನಟಿಸಿದ್ದಾರೆ.

4 ಮದ್ವೆ: ಈ ಹಿಂದೆ ಬಂದಿದ್ದ ‘ತಿಥಿ’ ಚಿತ್ರದಂತೆಯೇ ‘ಮದ್ವೆ’ ಚಿತ್ರವೂ ಸಹ ನಟನೆಯ ಯಾವುದೇ ಅನುಭವವಿಲ್ಲದವರನ್ನು ಕಲಾವಿದರನ್ನಾಗಿಸಿಕೊಂಡು ಮಾಡಲಾಗಿದೆ. ಹಿಂದೂ ಕೃಷ್ಣ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಮಂಡ್ಯದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಮದುವೆ ಹೇಗೆಲ್ಲಾ ನಡೆಯುತ್ತದೆ ಎಂಬುದನ್ನು ತೋರಿಸಲಾಗಿದೆ.

5 ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ: ಚಿತ್ರದ ಹೆಸರೇ ಹೇಳುವ ಹಾಗೆ ಇದೊಂದು ಕಾಲೇಜ್ ಲವ್ ಸ್ಟೋರಿಯಾಗಿದ್ದು, ವೇಮುಗಂಟಿ ನಿರ್ದೇಶನ ಮಾಡಿದ್ದಾರೆ. ಗೌತಮ್ ರಾಜ್ ಮತ್ತು ಕಿರಣ್ ಚಿಟ್ಟಾಣಿ ಚಿತ್ರದಲ್ಲಿ ನಟಿಸಿದ್ದಾರೆ. ನಟ ಸಾಯಿ ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

6 ಜಗಮಲ್ಲ : ಈ ಎಲ್ಲಾ ಕನ್ನಡದ ಚಿತ್ರಗಳೊಂದಿಗೆ ತಮಿಳಿನ ಸೂಪರ್ ಹಿಟ್ ಚಿತ್ರ ‘ವಿಶ್ವಾಸಂ’ ಈಗ ಕನ್ನಡಕ್ಕೆ ‘ಜಗಮಲ್ಲ’ ಎಂಬ ಹೆಸರಿನಲ್ಲಿ ಬರುತ್ತಿದೆ. ಚಿತ್ರ ಸಾಹಿತಿ, ನಿರ್ದೇಶಕ ಹೃದಯ ಶಿವ ಈ ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆ ರಚನೆ ಮಾಡಿದ್ದಾರೆ. ಚಿತ್ರದಲ್ಲಿ ಅಜಿತ್ ಕುಮಾರ್ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು,ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ.

ಈ ಎಲ್ಲಾ ಚಿತ್ರಗಳಿಗೂ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

#thiswekrealsedfilms, #kannada, #balkaninews #filmnews, #kannadasuddigalu, #ammanamane, #madve, #ondukathehella, #jagamalla

Tags

Related Articles