ಸುದ್ದಿಗಳು

‘ಥಗ್ಸ್ ಆಫ್ ಹಿಂದುಸ್ತಾನ್’ ಟ್ರೇಲರ್ ನನಪಿಸುತ್ತಿದೆ ‘ಬಾಹುಬಲಿ’ ಸಿನಿಮಾ!!

ಮುಂಬೈ,ಸೆ.27: ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ‘ಥಗ್ಸ್ ಆಫ್ ಹಿಂದುಸ್ತಾನ್ ‘ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಅಮಿತಾಬ್ ಬಚ್ಚನ್​​, ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಯಶ್ರಾಜ್ಫಿಲ್ಮ್ಸ್

ಬಾಲಿವುಡ್ ನಟ ಅಮೀರ್ ಖಾನ್ ಕುದುರೆ ಬದಲು ಕತ್ತೆಯನ್ನೇರಿ ಆಗಮಿಸಿದ್ದಾರೆ! ಹೌದು, ‘ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರದಲ್ಲಿ ಆಮೀರ್ ಖಾನ್ ಪಾತ್ರ ಎಂಥದ್ದು ಎಂಬುದನ್ನು ಪರಿಚಯಿಸುವ ಉದ್ದೇಶದಿಂದ ಸ್ವತಃ ಆಮೀರ್, ಮೋಷನ್ ಪೋಸ್ಟರ್ ಕೂಡ ಮಾಡಿದ್ದರು. ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್ ಅಡಿ ಆದಿತ್ಯ ಚೋಪ್ರಾ ಈ ಸಿನಿಮಾವನ್ನು ನಿರ್ಮಿಸಿದ್ದು, ವಿಜಯ್ ಕೃಷ್ಣ ಆಚಾರ್ಯ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ‘ಥಗ್ಸ್ ಆಫ್ ಹಿಂದುಸ್ತಾನ್ ‘ 1839 ರಲ್ಲಿ ಬ್ರಿಟಿಷರ ಆಡಳಿತಾಧಿಕಾರಿಯಾಗಿದ್ದ ಫಿಲಿಪ್​​ ಮೆಡ್ಯೂಸ್ ಟೈಲರ್ ಎಂಬ ಲೇಖಕ ಬರೆದಿರುವ ‘ಕನ್ಫೆಷನ್ಸ್ ಆಫ್ ಎ ಥಗ್ ‘ ಕಾದಂಬರಿ ಆಧಾರಿತ ಸಿನಿಮಾವಾಗಿದೆ. 1790-1805 ರ ಭಾರತದಲ್ಲಿ ಬ್ರಿಟಿಷ್ ಆಡಳಿತದ ಅವಧಿಯ ಚಿತ್ರಣವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಅಮೀರ್ ಲುಕ್

ಅಮೀರ್ ಲುಕ್​ ಗೆ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.8 ರಂದು ವಿಶ್ವಾದ್ಯಂತ ‘ಥಗ್ಸ್ ಆಫ್ ಹಿಂದುಸ್ತಾನ್’ ಸಿನಿಮಾ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ಅಮೀರ್ ಖಾನ್ ಫಿರಂಗಿ ಮುಲ್ಲಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗಾಗಿ 210 ಕೋಟಿ ರೂ. ಖರ್ಚು ಮಾಡಲಾಗಿದೆಯಂತೆ. ಅಮಿತಾಬ್, ಅಮೀರ್ ಖಾನ್ ಜೊತೆಗೆ ಕತ್ರೀನಾ ಕೈಫ್​, ಫಾತಿಮಾ ಸನಾ ಶಾಯಿಕ್ ಹಾಗೂ ಇನ್ನಿತರರು ನಟಿಸಿದ್ದಾರೆ.

Tags

Related Articles