ಸುದ್ದಿಗಳು

‘ಥಗ್ಸ್ ಆಫ್ ಹಿಂದೋಸ್ತಾನ್’ ಅಮೀರ್ ಖಾನ್ ಮತ್ತೊಂದು ಅವತಾರ ..

ಹೊಸ ಪೋಸ್ಟರ್ ಬಿಡುಗಡೆ..

ಮುಂಬೈ,ಸೆ.25: ಈ ದೀಪಾವಳಿಗೆ  ಬಾಲಿವುಡ್ ನ ಬಹು ಬೇಡಿಕೆಯ ಸಿನಿಮಾವಾದ ‘ಥಗ್ಸ್ ಆಫ್ ಹಿಂದೋಸ್ತಾನ್’ ಬಿಡುಗಡೆಯಾಗಲಿದೆ. ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ಮೋಷನ್ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.   ಇನ್ನು ಅಮೀರ್ ಖಾನ್ ‘ರಾಜಾ ಹಿಂದೂಸ್ತಾನಿ’  1996 ರಲ್ಲಿ ದೀಪಾವಳಿಗೆ ಬಿಡುಗಡೆಯಾಗಿತ್ತು . ಇನ್ನು ಕತ್ರಿನಾ ಕೈಫ್ ‘ಜಬ್ ತಕ್ ಹೈ ಜಾನ್’ ಕೂಡಾ ದೀಪಾವಳಿಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿತ್ತು..ಇನ್ನು ಈ ಚಿತ್ರ ಕೂಡ ಅದೇ ರೀತಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಲಿದೆಯಾ ಎಂದು ಕಾದು ನೋಡಬೇಕಿದೆ. ಎಲ್ಲಾ ಪಾತ್ರಗಳನ್ನು ಒಂದೊಂದಾಗಿ ಬಹಿರಂಗಪಡಿಸಿದ ನಂತರ, ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದ ಚಿತ್ರದ ಪೋಸ್ಟರ್ ನನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ಎಲ್ಲರೂ ವಿಭಿನ್ನ ಅವತಾರದಲ್ಲಿ ಕಾಣುತ್ತಿದ್ದಾರೆ…

ನವೆಂಬರ್ 7 ಕ್ಕೆ ಬಿಡುಗಡೆ

ನವೆಂಬರ್ 7 ಕ್ಕೆ ಬಿಡುಗಡೆಯಾಗಬೇಕಿದ್ದ  ಚಿತ್ರವನ್ನು ಅಮೀರ್ ಖಾನ್ ನವೆಂಬರ್ 8 ಮುಂದೂಡಿದ್ದಾರೆ. ಈ ಚಿತ್ರದಲ್ಲಿ ಅಮೀರ್ ಖಾನ್, ಕತ್ರೀನಾ ಕೈಫ್, ಅಮಿತಾಭ್ ಬಚ್ಚನ್, ಫಾತಿಮಾ ಸನಾ ಶೈಕ್ ಮತ್ತಿತರರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇದೇ ತಿಂಗಳು ಸೆಪ್ಟಂಬರ್ 27 ರಂದು ಬಿಡುಗಡೆಯಾಗಲಿದೆ..

Tags