ಸುದ್ದಿಗಳು

‘ಟಿಸ್ಸಾಟ್ ವಾಚ್’ ಮಳಿಗೆಯನ್ನು ಉದ್ಗಾಟಿಸಿದ ಡಿಪ್ಪಿ!!

ಇತ್ತೀಚೆಗೆ ಚೆನ್ನೈಯಲ್ಲಿಟಿಸ್ಸಾಟ್ ವಾಚ್’ ಹೊಸ ಮಳಿಗೆಯನ್ನು ಉದ್ಘಾಟಿಸಿದರು..

ಚೆನ್ನೈ,ಸೆ.02: ದೀಪಿಕಾ ಪಡುಕೋಣೆ ಈಗ ಚಿತ್ರರಂಗದಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ.ಹಾಗಾಗಿ ದೀಪಿಕಾ ಚೆನ್ನೈಗೆ ಪ್ರಯಾಣ ಮಾಡಿದ್ದಾರೆ. ಧಿಡೀರ್ ಚೆನ್ನೈಗೆ ಏಕೆ ಎಂಬ ಕುತೂಹಲ ನಿಮ್ಮಲಿರಬಹುದು. ಕಾರಣ ಇಷ್ಟೇ.. ದೀಪಿಕಾ ‘ಟಿಸ್ಸಾಟ್ ವಾಚ್’ ರಾಯಭಾರಿ. ಇತ್ತೀಚೆಗೆ ಚೆನ್ನೈಯಲ್ಲಿ ‘ಟಿಸ್ಸಾಟ್ ವಾಚ್’ ನ ಹೊಸ ಮಳಿಗೆಯನ್ನು ಉದ್ಘಾಟಿಸಿದರು. ಕಂಪೆನಿ ಈ ಸಂದರ್ಭದಲ್ಲಿ ಹೊಸ ವಿನ್ಯಾಸದ ವಾಚ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹಸೆಮಣೆ ಏರಲಿರುವ ಜೋಡಿ!!

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ವಿವಾಹ ಖಾತರಿಯಾಗಿದೆ. ಇನ್ನು ನವೆಂಬರ್ ತಿಂಗಳಿನಲ್ಲಿ ಈ ಜೋಡಿ ಹಸೆಮಣೆ ಏರಲಿದೆ . ಇದಾಗಲೇ ಎರಡೂ ಕುಟುಂಬದವರು ಮದುವೆ ಶಾಪಿಂಗ್ ನಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು ದಕ್ಷಿಣ ಭಾರತೀಯ ಸಂಪ್ರದಾಯದ ಅನುಸಾರ ವಿವಾಹವು ನೆರವೇರುತ್ತದೆ

 

 

Tags