ಸುದ್ದಿಗಳು

ಇವತ್ತು ಬೆಂಗಳೂರಿಗೆ ಬರುತ್ತಿದ್ದಾರೆ ನಟಿ ಕಾಜಲ್ ಅಗರ್ವಾಲ್

ಈಗಾಗಲೇ ಟಾಲಿವುಡ್ ನ ಬೆಡಗಿ ತಮನ್ನಾ ಬಾಟಿಯಾ ‘ಕೆ.ಜಿ.ಎಫ್’ ಚಿತ್ರದ ವಿಶೇಷ ಹಾಡಿಗಾಗಿ ಬೆಂಗಳೂರಿಗೆ ಆಗಮಿಸಿ, ಹೆಜ್ಜೆ ಹಾಕಿ ಹೋಗಿದ್ದಾರೆ. ಅವರಂತೆಯೇ ಮತ್ತೊಬ್ಬ ಬೆಡಗಿ ಕಾಜಲ್ ಇವತ್ತು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಬೆಂಗಳೂರು, ಆ. 10: ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಹು ಬೇಡಿಕೆಯ ನಾಯಕಿಯಾಗಿರುವ ‘ಮಗಧೀರ’ನ ಚೆಲುವೆ ಕಾಜಲ್ ಅಗರ್ವಾಲ್ ಚಂದನವನಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಕಳೆದ ಮೂರ್ನಾಲ್ಕು ದಿನಗಳಿಂದ ಕೇಳಿ ಬರುತ್ತಿತ್ತು.

ಯಶ್ ಅಭಿನಯದ ‘ಕೆ,ಜಿ.ಎಫ್’ ಚಿತ್ರದ ವಿಶೇಷ ಹಾಡಿನಲ್ಲಿ ನರ್ತಿಸಲಿದ್ದಾರೆ ಎಂಬ ಗುಸು ಗುಸು ಹರಿದಾಡಿತ್ತು. ಆದರೆ ಈ ಹಾಡಿನಲ್ಲಿ ತಮನ್ನಾ ಬಾಟಿಯಾ ನರ್ತಿಸಿದರು. ಆದರೆ ಮತ್ತೊಮ್ಮೆ ಕಾಜಲ್ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿದವು. ಅದಕ್ಕೆ ಕಾರಣವೂ ಇದೆ. ಹಾಗಂತಾ ಯಾವುದೇ ಸಿನಿಮಾದಲ್ಲೂ ಅವರು ನಟಿಸುತ್ತಿಲ್ಲ.

ಸಿಲಿಕಾನ್ ಸಿಟಿಗೆ ಕಾಜಲ್ ಆಗಮನ

ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಜಲ್ ಅಗರ್ವಾಲ್, ಇಂದು (ಆಗಸ್ಟ್ 11) ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ಸಂಜೆ 4.30ಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ತಿಳಿಸಿದ್ದಾರೆ.

ಕನ್ನಡದ ಹಾಡಿಗೆ ಧ್ವನಿ

ಪುನೀತ್ ರಾಜ್ ಕುಮಾರ್ ಅಭಿನಯದ ‘ಚಕ್ಕವ್ಯೂಹ’ ಚಿತ್ರದ ‘ಅರೇ.. ಅರೇ.. ಏನಾಯ್ತು..’ ಹಾಡಿಗಾಗಿ ಕಾಜಲ್ ಧ್ವನಿ ನೀಡಿದ್ದಾರೆ. ಇದರೊಂದಿಗೆ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ‘ಬಟರ್ಫ್ಲೈ’ ತೆಲುಗು ವರ್ಷನ್ ನಲ್ಲಿ ಅಭಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರೀಕರಣಕ್ಕಾಗಿ ಮೈಸೂರಿಗೆ ಭೇಟಿ ನೀಡಿದ್ದರು.

ಹಿಂದಿ ಬ್ಲಾಕ್ ಬ್ಲಸ್ಟರ್ ‘ಕ್ವೀನ್’ ಚಿತ್ರದ ರಿಮೇಕ್ ಆದ ‘ಬಟರ್ ಫ್ಲೈ’ ಸದ್ಯ ಮೂರು ಭಾಷೆಯಲ್ಲಿ ತಯಾರಾಗುತ್ತಿದೆ. ಈ ಚಿತ್ರದ ತೆಲುಗಿ ವರ್ಷನ್ ನಲ್ಲಿ ಕಾಜಲ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇದೇ ಪಾತ್ರವನ್ನು ಕನ್ನಡದಲ್ಲಿ ನಟಿ ಪಾರುಲ್ ಯಾದವ್ ಮಾಡಲಿದ್ದಾರೆ.

Tags