ಸುದ್ದಿಗಳು

ನಿರೀಕ್ಷೆಯ ಮಟ್ಟ ತಲುಪದ ‘2.0’ ಟೀಸರ್?

ಚೆನೈ, ಸೆ.16: ತಾಂತ್ರಿಕತೆಯ ಗ್ಲೋರಿಯನ್ನು ಎಷ್ಟರ ಮಟ್ಟಕ್ಕೆ ಬಳಸಿಕೊಂಡು ಪ್ರೇಕ್ಷಕನನ್ನು ಮೋಡಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿತ್ತು. ಇದಾದ ಬಳಿಕ ತಂತ್ರಜ್ಞಾನ, ಗ್ರಾಫೀಕ್ಸ್ ಅನ್ನು ಬಳಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದೆ ರಜನಿಕಾಂತ್ ಅಭಿನಯದ ‘2.0’ ಚಿತ್ರ. ಚಿತ್ರದ ಕುರಿತಂತೆ ಹಲವು ದಿನಗಳಿಂದ ಕುತೂಹಲ ಹೆಚ್ಚಾಗುತ್ತಲೇ ಇದ್ದು ಇದೀಗ 2.0 ಟೀಸರ್ ಬಿಡುಗಡೆಯಾಗಿದೆ.

ವರ್ಷದಿಂದಲೂ ಸುದ್ದಿಯಲ್ಲಿದ್ದ ‘ 2.0’  ಅದ್ಧೂರಿ ಬಜೆಟ್‌, ದೊಡ್ಡ ತಾರಾಬಳಗ, ತಂತ್ರಗಾರಿಕೆಯಿಂದಾಗಿ ತೀವ್ರ ಕುತೂಹಲ ಮೂಡಿಸಿರುವ ಚಿತ್ರ.


ರಜಿನಿಕಾಂತ್ ಮತ್ತು ಅಕ್ಷಯ್ ಕುಮರ್ ಅಭಿನಯದ ಸಿನಿಮಾ

ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಆದರೆ ಬಹುನಿರೀಕ್ಷೆಯ 2.0 ಚಿತ್ರದ ಟೀಸರ್ ಪ್ರೇಕ್ಷಕನ ಮನಮುಟ್ಟುವಲ್ಲಿ ವಿಫಲವಾಗಿದೆಯೇನೋ ಎಂದೆನಿಸುತ್ತಿದೆ. ಟೀಸರ್ ಗಮನಿಸಿದರೆ ತಂತ್ರಜ್ಞಾನದ ಡೆಪ್ತ್ ಮುಟ್ಟುವಲ್ಲಿ ಶಂಕರ್ ವಿಫಲರಾದಂತೆ ಭಾಸವಾಗುತ್ತಿದ್ದು, ಸಪ್ಪೆ ಎನಿಸುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ.ಖಳನಾಯಕನ ಪಾತ್ರದಲ್ಲಿ ಅಕ್ಷಯ್

ಚಿತ್ರದಲ್ಲಿ ಅಕ್ಷಯ್ ಕುಮಾರ್ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಜನಿ ಹಿಂದಿನಂತೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾನವ ಸಂಕುಲಕ್ಕೆ ಮಾರಕವಾಗುವ ದೈತ್ಯ ಶಕ್ತಿಯನ್ನು ಮುಗಿಸಲು ವಿಜ್ಞಾನಿಯೊಬ್ಬನ ಯೋಜನೆಯಂತೆ ಜನ್ಮತಾಳುವ ಕೃತಕ ಮಾನವ ಅಂದರೆ ರೋಬೋ ಹಾಗೂ , ಅತಿಮಾನು‍ಷ ಶಕ್ತಿಯ ನಡುವಣ ನಡೆಯುವ ಜಟಾಪಟಿಯೇ 2.0 ಹೂರಣ. 2ಡಿ ಮತ್ತು 3ಡಿ ಅವತರಣಿಕೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು, 2 ಡಿ ತೀರಾ ಸಪ್ಪೆ ಎನಿಸಿದರೆ, 3ಡಿ ಟೀಸರ್‌ ಪ್ರೇಕ್ಷಕನಿಗೆ ಕೊಂಚ ಇಷ್ಟವಾಗಿದೆ.540 ಕೋಟಿ ರೂಪಾಯಿ ಬಜೆಟ್ ನ ಸಿನಿಮಾ

ಶಂಕರ್ ನಿರ್ದೇಶನದ ಎಂದಿರನ್ ಚಿತ್ರ 2010ರಲ್ಲಿ ಭಾರಿ ಮೋಡಿ ಮಾಡಿತ್ತು. ಎಂದಿರನ್ ಚಿತ್ರದಲ್ಲಿನ ತಂತ್ರಜ್ಞಾನ ಜನರಿಗೆ ಇಷ್ಟವಾಗಿತ್ತು. ಆದರೆ ಇದಾದ ಬಳಿಕ ಬಿಡುಗಡೆಯಾದ ಬಾಹುಬಲಿ ಚಿತ್ರಗಳು ತಂತ್ರಜ್ಞಾನದ ಎಲ್ಲಾ ಆಯಾಮಾವನ್ನು ಶ್ರೀಮಂತವಾಗಿ ತೋರಿಸಿದ್ದರಿಂದ, ಪ್ರೇಕ್ಷಕ ಈ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿರುವುದು ಸಹಜ. ಆದರೆ ತಂತ್ರಜ್ಞಾನವನ್ನು ಹೆಚ್ಚಾಗಿ ಅವಲಂಬಿತವಾಗಿರುವ ಚಿತ್ರಗಳು ಇದಕ್ಕಿಂತ ಕೊಂಚ ಸೋತರು, ಪ್ರೇಕ್ಷಕನಿಗೆ ಇದು ರುಚಿಸುವುದಿಲ್ಲ. ಇದೇ ಕಾರಣಕ್ಕೆ ಇದೀಗ 2.0 ಚಿತ್ರದ ಟೀಸರ್  ಬಗ್ಗೆ ಕೆಲವೊಂದು ಜೋಕುಗಳು ಹರಿದಾಡಿದರೆ, ಮತ್ತೆ ಕೆಲವರು ಶಂಕರ್ ಅವರು ಚಿತ್ರವನ್ನೂ ಇನ್ನೂ ಆಕರ್ಷಕವಾಗಿ ತೆಗೆಯಬಹುದಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. 540 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಚಿತ್ರದಲ್ಲಿ ಆ್ಯಮಿ ಜಾಕ್ಸನ್‌ ಹಿರೋಯಿನ್ ಆಗಿ ನಟಿಸಿದ್ದು, ಸಂಗೀತ ಸಂಯೋಜನೆ ಎ ಆರ್ ರೆಹಮಾನ್ ಮಾಡಿದ್ದಾರೆ.

Tags

Related Articles