ಸುದ್ದಿಗಳು

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ‘ಮೇಡ್ ಫಾರ್ ಈಚ್ ಅದರ್’ ಎಂದ ಅಭಿಮಾನಿ…!

ವಿಜಯ್ ಹಾಗೂ ರಶ್ಮಿಕಾ ಅಭಿನಯವನ್ನು ಮೆಚ್ಚಿದ ಜೋಡಿ

ರಶ್ಮಿಕಾ ಮತ್ತು ವಿಜಯ್  ಹೇಳಿ ಮಾಡಿಸಿದ ಜೋಡಿ, ನೀವಿಬ್ಬರೂ ಮದುವೆಯಾದರೆ ‘ಮೇಡ್ ಫಾರ್ ಈಚ್ ಅದರ್’. ಪ್ಲೀಸ್ ಒಪ್ಪಿಕೊಳ್ಳಿ ಅಣ್ಣ’  ಎಂದು ವಿಜಯ್ ಅಭಿಮಾನಿಯೊಬ್ಬ ಮನವಿ ಮಾಡಿಕೊಂಡಿದ್ದಾನೆ.

ಬೆಂಗಳೂರು, ಸೆ.04: ಚಂದನವನದ ಕ್ರಶ್ ರಶ್ಮಿಕಾ , ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಬಂದು ಎಲ್ಲರ ಗಮನಹರಿಸಿ ಪುನೀತ್, ದರ್ಶನ್ ಮತ್ತು ಗಣೇಶ್ ಜೊತೆ ಅಭಿನಯಿಸಿ, ತೆಲುಗು ಚಿತ್ರರಂಗದಲ್ಲೂ ನಿರತರಾಗಿದ್ದಲದೇ, ಸಿಂಪಲ್ ಹುಡುಗ ರಕ್ಷಿತ್  ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಭಾರೀ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.ಮೋಡಿ ಮಾಡಿದ ‘ಗೀತಾ ಗೋವಿಂದಂ’  ಸಿನಿಮಾ

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು  ತೆಲುಗಿನಲ್ಲಿ ‘ಗೀತಾ ಗೋವಿಂದಂ’ ಸಿನಿಮಾ ಬಿಡುಗಡೆಯಾಗಿ , ಭರ್ಜರಿಯಾಗಿ ಕಲೆಕ್ಷನ್ ಮಾಡಿದ್ದಲ್ಲದೆ, ಚಿತ್ರಮಂದಿರದಲ್ಲಿ  ಮುಂದುವರೆದುಕೊಂಡು ಹೋಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯ ಚಿತ್ರರಂಗವನ್ನು ಒಂದೊಮ್ಮೆ ತಿರುಗೆ ನೋಡುವಂತೆ ಮಾಡಿತ್ತು, ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ನಟನೆ ಮನೋಜ್ಞವಾಗಿ ಮೂಡಿಬಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರಿಬ್ಬರ ನಟನೆ ಕಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಮೇಡ್ ಫಾರ್ ಈಚ್ ಅದರ್

ಹೌದು, ಇತ್ತೀಚೆಗೆ ‘ಗೀತಾ ಗೋವಿಂದಂ’ ಸಿನಿಮಾವನ್ನು ನೋಡಿದ ಅಭಿಮಾನಿ, ವಿಜಯ್ ಹಾಗೂ ರಶ್ಮಿಕಾ ಅಭಿನಯವನ್ನು ಮೆಚ್ಚಿ, ‘ರಶ್ಮಿಕಾ ಮತ್ತು ವಿಜಯ್  ಹೇಳಿ ಮಾಡಿಸಿದ ಜೋಡಿ, ನೀವಿಬ್ಬರೂ ಮದುವೆಯಾದರೆ ‘ಮೇಡ್ ಫಾರ್ ಈಚ್ ಅದರ್’. ಪ್ಲೀಸ್ ಒಪ್ಪಿಕೊಳ್ಳಿ ಅಣ್ಣ ‘ ಎಂದು ವಿಜಯ್ ಅಭಿಮಾನಿಯೊಬ್ಬ ಮನವಿ ಮಾಡಿಕೊಳ್ಳುವ ಮೂಲಕ  ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾನೆ.

Tags

Related Articles