
ಹೈದ್ರಾಬಾದ್ ನ ಗಚ್ಚಿಬೌಲಿ ಏರಿಯಾದಲ್ಲಿ ಮಲ್ಟಿಫ್ಲೆಕ್ಸ್ ಕಟ್ಟಿಸಲು ಮಹೇಶ್ ಚಿಂತನೆ ಮಾಡಿದ್ದಾರಂತೆ.
ಹೈದರಾಬಾದ್, ಸೆ.05: ಸಾಮಾನ್ಯವಾಗಿ ಸಿನಿಮಾ ಮಂದಿ ಸಿನಿಮಾ ಮಾಡೋದರ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲೂ ಭಾಗಿಯಾಗುತ್ತಾರೆ. ಸಿನಿಮಾದಿಂದ ಬಂದ ಸಂಭಾವನೆಯನ್ನು ಕೆಲವೊಂದಿಷ್ಟು ವ್ಯವಹಾರಗಳಲ್ಲಿ ಹೂಡುತ್ತಾರೆ. ಇದೀಗ ನಟ ಮಹೇಶ್ ಬಾಬು ಕೂಡ ಹೊಸದೊಂದು ವ್ಯವಹಾರಕ್ಕೆ ಕೈ ಹಾಕುತ್ತಿದ್ದಾರಂತೆ.
ಏಷ್ಯನ್ ಫಿಲ್ಮ್ ಜೊತೆ ಕೈಗೂಡಿಸಿದ ಮಹೇಶ್
ಹೌದು, ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ತ ಇದೀಗ ಮಲ್ಟಿಫ್ಲೆಕ್ಸ್ ನತ್ತ ವಾಲಿದೆಯಂತೆ. ಮೂಲಗಳ ಪ್ರಕಾರ ಹೈದ್ರಾಬಾದ್ ನ ಗಚ್ಚಿಬೌಲಿ ಏರಿಯಾದಲ್ಲಿ ಮಲ್ಟಿಫ್ಲೆಕ್ಸ್ ಕಟ್ಟಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಸದ್ಯ ಈ ವ್ಯವಹಾರಕ್ಕೆ ಏಷ್ಯನ್ ಫಿಲ್ಮ್ ಜೊತೆ ಕೈಗೂಡಿಸಿದ್ದಾರಂತೆ. ಈಗಾಗಲೇ ಈ ಬೃಹತ್ ಬಹು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಸುದ್ದಿಯಾಗಿದೆ.ಸಾಮಾನ್ಯವಾಗಿ ಕೆಲವೊಂದಿಷ್ಟು ಸಿನಿಮಾ ಮಂದಿ ಸೈಡ್ ಬ್ಯುಸಿನೆಸ್ ಮಾಡೋದು ಸಾಮಾನ್ಯ. ಆದರೆ ಸಿನಿಮಾ ಜೊತೆ ಜೊತೆಗೆ ಅಮರಾವತಿ, ವೈಜಾಗ್ ನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿರುವ ಮಹೇಶ್ ಬಾಬು ಇದೀಗ ಹೊಸದೊಂದು ವ್ಯವಹಾರಕ್ಕೆ ಕೈ ಹಾಕುತ್ತಿದ್ದಾರೆ.