ಸುದ್ದಿಗಳು

ಒಂದು ತಪ್ಪು ಹೆಜ್ಜೆ, ಅವರನ್ನು ಚಿತ್ರರಂಗದಿಂದಲೇ ನಾಪತ್ತೆಯಾಗುವಂತೆ ಮಾಡುತ್ತಿದೆಯೇ…?

ಹೈದ್ರಾಬಾದ್, ಫೆ.08:

ನಿರ್ದೇಶಕ ಮಾರುತಿ  ಕೌಟುಂಬಿಕ ಚಿತ್ರಗಳನ್ನು ಮಾಡುವ ಮೂಲಕ ಚಿತ್ರರಸಿಕರ ಮನಗೆದ್ದಿದ್ದರು. ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದ  ನಿರ್ದೇಶಕರ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿಕೊಂಡಿದ್ದರು. ಭಲೆ ಭಲೆ ಮಗಾದಿವೋಯಿ ಮತ್ತು ಮಹಾನುಭಾವುಡು ಚಿತ್ರದ ನಂತರ, ಖಂಡಿತವಾಗಿಯೂ ಮಾರುತಿ ಅವರು ಸ್ಟಾರ್ ನಿರ್ದೇಶಕರ ಮತ್ತೊಂದು ಹಂತಕ್ಕೆ ಏರುತ್ತಾರೆ ಎಂದೇ ಎಲ್ಲರೂ  ಭಾವಿಸಿದ್ದರು. ಆದರೆ ಅವರು ಇಟ್ಟ ಒಂದು ತಪ್ಪು ಹೆಜ್ಜೆ ಇದೀಗ ಅವರನ್ನು ಇಂಡಸ್ಟ್ರೀಯಿಂದಲೇ ದೂರ ಉಳಿಯುವಂತೆ ಮಾಡಿದೆ. ಮಾರುತಿ ಇದೀಗ ಎಲ್ಲೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಚಿತ್ರರಂಗದಲ್ಲಿ ಯಾರಿಗೂ ಮಾಹಿತಿಯೇ ಇಲ್ಲವಂತೆ.

ಎಲ್ಲಿದ್ದಾರೆ ನಿರ್ದೇಶಕ ಮಾರುತಿ…?

ಅಂದಹಾಗೆ ನಿರ್ದೇಶಕ ಮಾರುತಿ ಅವರ ಬಗ್ಗೆ ಪ್ರೇಕ್ಷಕ ಮಾತ್ರವಲ್ಲ ಚಿತ್ರರಂಗದ ಮಹಾನ್ ನಟರು ಕೂಡ ಭರವಸೆ ಇಟ್ಟುಕೊಂಡಿದ್ದರು. ಎಲ್ಲವೂ ಸರಿಯಾಗಿಯೇ ಸಾಗುತ್ತಿದ್ದಾಗಲೇ ಮಾರುತಿ ಅವರು ನಾಗಚೈತನ್ಯ ಅವರ ಶೈಲಜಾ ರೆಡ್ಡಿ ಅಲ್ಲುಡು ಚಿತ್ರದೊಂದಿಗೆ ಬಂದರು. ಈ  ಚಿತ್ರ ಅವರು ಅದುವರೆಗೂ ಗಳಿಸಿದ ಎಲ್ಲಾ ರೀತಿಯ ಸ್ಟಾರ್ ಪಟ್ಟವನ್ನು ಹಾಳುಮಾಡಿಕೊಂಡರು. ಅಷ್ಟೇ ಅಲ್ಲದೆ ಆಗಿರುವ ಅವರ ರೆಪ್ಯೂಟೇಷನ್ ಗೆ ಆದ ಡ್ಯಾಮೇಜ್ ನಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಶೈಲಾಜಾ ರೆಡ್ಡಿ ಚಿತ್ರಕ್ಕಿಂತ ಮೊದಲು, ಹಲವು ಮಂದಿ ಸ್ಟಾರ್ ನಟರು, ಮಾರುತಿ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದರು.

ವಿಜಯದೇವರಕೊಂಡ ಮತ್ತು ಸಾಯಿ ಧರಂ ತೇಜಾ ಸೇರಿದಂತೆ ಹಲವು ಮಂದಿ ಮಾರುತಿ ಜೊತೆಗೆ ಕೆಲಸ ಮಾಡುವ ಮಾತುಕತೆ ಕೂಡ ನಡೆಸಿದ್ದರು ಎನ್ನಲಾಗಿದೆ. ಆದರೆ ಶೈಲಜಾ ರೆಡ್ಡಿ ಸೋತ ಬಳಿಕ ಯಾವೊಬ್ಬ ನಟನೂ ಮಾರುತಿ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಲಿಲ್ಲ. ಮಾರುತಿ ಸಾಮಾನ್ಯವಾಗಿ ಯಾವುದೇ ಗ್ಯಾಪ್ ಇಲ್ಲದೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಜೊತೆಗೆ ಬರುವವರು. ಆದರೆ ಇದೀಗ 6 ತಿಂಗಳಾದರೂ ಚಿತ್ರದ ಬಗ್ಗೆ ಯಾವುದೇ ಸದ್ದಿಲ್ಲ. ಒಂದು ಮೂಲಗಳ ಪ್ರಕಾರ ಸದ್ಯಕ್ಕೆ ಮಾರುತಿ ಚಿತ್ರಕತೆಯೊಂದನ್ನು ರೆಡಿ ಮಾಡುತ್ತಿದ್ದು, ಯಾವ ಹಿರೋ ಸದ್ಯಕ್ಕೆ ಲಭ್ಯವಿರುತ್ತಾರೋ ಅವರ ಜೊತೆ ಸಿನಿಮಾ ಮಾಡಲು ಅವರು ಸಿದ್ದರಿದ್ದಾರೆ ಎನ್ನಲಾಗುತ್ತಿದೆ.

‘ಪ್ರೀತಿ ಮತ್ತು ಶ್ಲಾಘನೆಗೆ ಧನ್ಯವಾದ’ ಎಂದ ದಚ್ಚು!!

#tollywood #telugumovies #tollywooddirectormaruthi #shailajareddyalludutelugumovie #balkaninews

Tags