ಸುದ್ದಿಗಳು

ಪವರ್ ಸ್ಟಾರ್ ಗೆ ‘ಲೇಡಿ ಗಬ್ಬರ್ ಸಿಂಗ್’ ಡೆಡಿಕೇಟ್ ಮಾಡಿದ ಪೂನಂ…!

‘ಮೈ ರಿಯಲ್ ಇನ್ಸ್ಪಿರೇಷನ್’

ಹ್ಯಾಪಿ ಬರ್ತ್​ಡೇ ಪವರ್​ ಸ್ಟಾರ್​ ಪವನ್​​​​​​ ಕಲ್ಯಾಣ್​ ಸರ್​.  ನನ್ನ ಮುಂದಿನ ಚಿತ್ರ ‘ಲೇಡಿ ಗಬ್ಬರ್ ಸಿಂಗ್’​ ಸಿನಿಮಾವನ್ನು ನಿಮಗೆ ಡೆಡಿಕೇಟ್​ ಮಾಡುತ್ತಿದ್ದೇನೆ.

ಹೈದರಾಬಾದ್, ಸೆ.03: ಸದಾ ಒಂದಿಲ್ಲೊಂದು ವಿವಾದದಲ್ಲಿರುವ ನಟಿಮಣಿಯರಲ್ಲಿ ಪೂನಂ ಪಾಂಡೆ ಕೂಡ ಒಬ್ಬರು. ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿರುವ ಇವರು ಸದ್ಯ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದು ವಿವಾದದ ಮಾತಿನಿಂದಲ್ಲ. ಬದಲಾಗಿ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟು ಹಬ್ಬಕ್ಕೆ ಶುಭಾಷಯ ಕೋರೋ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.

ಪೂನಂ ಟ್ವೀಟರ್ ನ ಶುಭಾಷಯ

ಹೌದು, ನಿನ್ನೆಯಷ್ಟೆ ,ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ 47 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸಿನಿ ಮಂದಿ ಇವರಿಗೆ ವಿಶ್ ಮಾಡೋ ಮೂಲಕ ಹರಸಿದ್ದಾರೆ. ಇದೀಗ ಪೂನಂ ಕೂಡ ಶುಭಾಷಯ ಕೋರಿದ್ದಾರೆ. “ಹ್ಯಾಪಿ ಬರ್ತ್​ಡೇ ಪವರ್​ ಸ್ಟಾರ್​ ಪವನ್​​​​​​ ಕಲ್ಯಾಣ್​ ಸರ್​. ಈ ದಿನ ನನ್ನ ಮುಂದಿನ ಚಿತ್ರ ‘ಲೇಡಿ ಗಬ್ಬರ್ ಸಿಂಗ್​’ ಸಿನಿಮಾವನ್ನು ನಿಮಗೆ ಡೆಡಿಕೇಟ್​ ಮಾಡುತ್ತೇನೆ. ಪವನ್ ಕಲ್ಯಾಣ್​ ‘ಮೈ ರಿಯಲ್​ ಇನ್​ಸ್ಪಿರೇಷನ್’ ಅಂತಾ” ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.ಇನ್ನು ಇವರ ಟ್ವಿಟ್ ಅನ್ನು ಕೆಲವೊಂದಿಷ್ಟು ಮಂದಿ  ಸಿನಿಮಾ ಪ್ರಮೋಷನ್ ಗಾಗಿ ಮಾಡಿದ್ದಾರೆ ಅಂತಾ ರಿಪ್ಲೇ ಮಾಡಿದ್ದಾರೆ. ಒಟ್ನಲ್ಲಿ ಈ ಶುಭಾಷಯ ಮಾಡೋ ಮೂಲಕವೂ ಮತ್ತೊಮ್ಮೆ ಸುದ್ದಿಯಲ್ಲಿ ಬಂದರೂ ಪೂನಂ.

Tags

Related Articles