ಸುದ್ದಿಗಳು

ಹರಿಕೃಷ್ಣ ಪಾರ್ಥೀವ ಶರೀರದ ಮುಂದೆ ಸೆಲ್ಫಿ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿಗಳು…!

ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರ ಪರಿಣಾಮ ಸಾವನ್ನಪ್ಪಿದ ಹರಿಕೃಷ್ಣ

ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದ ಹರಿಕೃಷ್ಣ. ಈ ಸಮಯದಲ್ಲಿ ಅವರ ಪಾರ್ಥೀವ ಶರೀರ ಆಸ್ಪತ್ರೆಯಲ್ಲಿರುವಾಗ ಆಸ್ಪತ್ರೆ ಸಿಬ್ಬಂದಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

ಹೈದರಾಬಾದ್, ಸೆ.01: ತಮ್ಮ ನೆಚ್ಚಿನ ನಟರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿಯಾಗೋದು ಸರ್ವೇ ಸಾಮಾನ್ಯ. ಅವರಿಗೆ ಶೇಕ್ ಹ್ಯಾಂಡ್ ಕೊಡಬೇಕು, ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕೆನ್ನುವ ಆಸೆಗಳು ಹೊಸದೇನಲ್ಲಾ. ಆದರೆ ಸಾವನ್ನಪ್ಪಿದ ನಂತರವೂ ಸೆಲ್ಫಿ ತೆಗೆದುಕೊಳ್ತಾರೆ ಅದನ್ನು ಏನನ್ನಬೇಕೋ ಗೊತ್ತಿಲ್ಲ. ಇಂಥಹದೊಂದು ವಿಚಿತ್ರ ಘಟನೆ ನಂದಮೂರಿ ಹರಿಕೃಷ್ಣ ಅವರು ಸಾವನ್ನಪ್ಪಿದಾಗ ನಡೆದಿದೆ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಹರಿಕೃಷ್ಣ

ಹೌದು, ಟಾಲಿವುಡ್ ನಟ ಹಾಗೂ ರಾಜಕಾರಣಿ ನಂದಮೂರಿ ಹರಿಕೃಷ್ಣ ಮೊನ್ನೆ ಮುಂಜಾನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಾವೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದ ಹರಿಕೃಷ್ಣ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿತ್ತು. ತೀರ್ವ ಗಾಯಗೊಂಡ ಹರಿಕೃಷ್ಣ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಈ ಸಮಯದಲ್ಲಿ ಅವರ ಪಾರ್ಥೀವ ಶರೀರ ಆಸ್ಪತ್ರೆಯಲ್ಲಿರುವಾಗ ಆಸ್ಪತ್ರೆ ಸಿಬ್ಬಂದಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇದೀಗ ಇವರ ಕೆಲಸಕ್ಕೆ ಎಲ್ಲೆಡೆ ತೀರ್ವ ವಿರೋಧ ವ್ಯಕ್ತವಾಗುತ್ತಿದೆ.ಫೋಟೋ ಕ್ಲಿಕ್ಕಿಸಿಕೊಂಡ ಡ್ಯೂಟಿ ನರ್ಸ್ ಗಳು

 

ಆಸ್ಪತ್ರೆಯಲ್ಲಿ ಇಬ್ಬರು ಡ್ಯೂಟಿ ನರ್ಸ್‌ಗಳು, ಒಬ್ಬ ವಾರ್ಡ್ ಬಾಯ್ ಹಾಗೂ ಒಬ್ಬರು ವಾರ್ಡ್ ಗರ್ಲ್ಸ್ ಹರಿಕೃಷ್ಣರವರ ಶವದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವಿರೋಧ  ವ್ಯಕ್ತವಾಗುತ್ತಿದೆ.  ಸಿಬ್ಬಂದಿಗಳ ವಿರುದ್ದ ಆಸ್ಪತ್ರೆ ಮಂಡಳಿ ಕ್ರಮಕ್ಕೆ ಮುಂದಾಗುತ್ತಿದೆಯಂತೆ. ಅಗತ್ಯ ಬಿದ್ದಲ್ಲಿ ಪೊಲೀಸ್ ಕ್ರಮಕ್ಕೂ ಮುಂದಾಗಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ .ಅಭಿಮಾನ ಅನ್ನೋದು ಎಲ್ಲರಿಗೂ ಇದ್ದೇ ಇರುತ್ತೆ ಆದ್ರೆ ಅದನ್ನು ಹೀಗೆ ತೋರಿಸೋದು ತಪ್ಪು ಅನ್ನೋದು ಸದ್ಯದ ವಾದ.

Tags