ಸುದ್ದಿಗಳು

ಒಂದೇ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ ‘ನ್ಯಾಚುರಲ್ ಸ್ಟಾರ್ ಮತ್ತು ಸ್ಟೈಲಿಶ್ ಸ್ಟಾರ್’

ಹೈದರಾಬಾದ್, ಆ.31: ತೆಲುಗು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಸಿಗುವುದು ಅಪರೂಪ. ಅದೇನಾದರೂ ಕಾಣಿಸಿಕೊಂಡರು ಎಂದರೇ  ,ಅದು ಸಿನಿಮಾದ ವಿಚಾರವಾಗಿ ಅಥವಾ ಮದುವೆ ಸಮಾರಂಭಗಳಲ್ಲಿ ಮಾತ್ರ.  ಹಲವಾರು ಕಲಾವಿದರು ಪರದೆಯ ಮೇಲೂ ಮತ್ತು ತೆರೆ ಹಿಂದೆ, ಎರಡೂ ಕಡೆಗಳಲ್ಲಿ ಸ್ನೇಹ ಭಾಂದವ್ಯವನ್ನು ಹೊಂದಿದ್ದಾರೆ.

ಇದೀಗ ಹೊಸ ವಿಷಯವೇನೆಂದರೆ, ಮದುವೆಯ  ಸಮಾರಂಭದಲ್ಲಿ ಎಲ್ಲಾ ಕಲಾವಿದರು ಒಟ್ಟಾಗಿ ಸೇರಿ ನೃತ್ಯ ಮಾಡುವುದನ್ನು ನೋಡಿದ್ದೇವೆ. ಚಿರಂಜೀವಿ ಅವರ ಮಗಳ ಮದುವೆಯಲ್ಲಿ ಬಾಲಕೃಷ್ಣ ಮತ್ತು ನಾಗಾರ್ಜುನ, ವೆಂಕಟೇಶ್ ಒಟ್ಟಾಗಿ ಸೇರಿ ನೃತ್ಯ ಮಾಡುವುದರ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 ಸ್ನೇಹಿತನ ಮದುವೆಗೆಂದು ಬ್ಯಾಂಕಾಕ್ ಗೆ ತೆರಳಿದ  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಚುರಲ್ ಸ್ಟಾರ್ ನಾನಿ ಇಬ್ಬರು ಒಟ್ಟಾಗಿ ಸೇರಿ ಸ್ನೇಹಿತನ ವಿವಾಹ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುವುದರೊಂದಿಗೆ, ಇವರ ಪತ್ನಿಯರು ಕೂಡ   ನೃತ್ಯ  ಮತ್ತು ಗಾಯನದ ಮೂಲಕ ಕಾರ್ಯಕ್ರಮದಲ್ಲಿ ನೆರದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಅರ್ಜುನ್ ಮತ್ತು ನಾನಿ ದಂಪತಿಗಳು ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುವುದರ ಮೂಲಕ ನಾನಿ ಮತ್ತು ಅಲ್ಲು ಅರ್ಜುನ್ ಸ್ನೇಹ ಭಾಂದವ್ಯ ಯಾವ ರೀತಿ ಇದೆ ಎಂಬುದು ಅವರ ಅಭಿಮಾನಿಗಳು ನೋಡಿ ಖುಷಿಪಡಬಹುದಾಗಿದೆ.

Tags