ಸುದ್ದಿಗಳು

ರಸ್ತೆಯಲ್ಲಿನ ಟೀ ಕಪ್ ಗಳನ್ನು ತೆಗೆದು ಹಾಕಿದ ಬಾಹುಬಲಿಯ ‘ಬಿಜ್ಜಳ ದೇವ’

ಸ್ವಚ್ಚ ಭಾರತ  ಅಭಿಯಾನಕ್ಕೆ ಇಂಬಾಗಿ ನಿಂತ ನಾಸರ್!

ಹೈದರಾಬಾದ್, ಸೆ,01: ಕನ್ನಡ ಚಿತ್ರರಂಗದಲ್ಲಿ ಅಲ್ಲದೆ, ಬೇರೆ ಭಾಷೆಗಳಲ್ಲಿ ಸಿನಿಮಾಗಳನ್ನು ಮಾಡಿ ಪ್ರಸಿದ್ಧಿ ಪಡೆದಿರುವ ನಟ ನಾಸರ್. ಈತ ಎಲ್ಲಾ ಪಾತ್ರಗಳಿಗೂ ಸೈ ಎನ್ನುವ ಕಲಾವಿದ. ತಮಿಳು , ತೆಲುಗು ಕನ್ನಡ, ಹಿಂದಿ ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಹಲವು ದಶಕಗಳಿಂದ ನಾಸರ್ ಚಿತ್ರರಂಗದಲ್ಲಿ ಹೆಸರು ಮಾಡುತ್ತ ಬಂದಿದ್ದಾರೆ. ಸದ್ಯ ನಾಸರ್ ‘ಕೆಜಿಎಫ್’ ಮತ್ತು ‘ಸೈರಾ’ ನರಸಿಂಹ ರೆಡ್ಡಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ಇತ್ತೀಚೆಗೆ ಸಿನಿಮಾ ಚಿತ್ರೀಕರಣದ ಸಲುವಾಗಿ  ತಮಿಳುನಾಡಿಗೆ ತೆರೆಳಿದ್ದರು.  ಶೂಟಿಂಗ್ ನಡೆಯುತ್ತಿದ್ದ ವೇಳೆ ಅಲ್ಲಿನ ಚಿತ್ರತಂಡದವರು  ಟೀ ಕಾಫಿಯನ್ನು ಕುಡಿದು ಆ ಕಪ್ ಗಳನ್ನು ಅಲ್ಲಲ್ಲಿ ಬಿಸಾಡಿ ಹೋಗಿದ್ದರು, ಅದನ್ನು ಕಂಡ ನಾಸರ್ ಸ್ವಲ್ಪವು ಹಿಂಜರಿಯದೇ ಅಲ್ಲಿ ಬಿದ್ದಿದ್ದ ಲೋಟಗಳನ್ನು ಆರಿಸಿ ರಸ್ತೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಅಲ್ಲಿ ನೆರೆದಿರುವ ಜನರಿಗೆ ಅಚ್ಚರಿಯನ್ನು ಉಂಟು ಮಾಡಿದ್ದಾರೆ.

ಅಷ್ಟು ದೊಡ್ಡ ನಟರಾಗಿರುವ ನಾಸರ್ ಯಾವುದೇ ಸ್ವಪ್ರತಿಷ್ಟೆಯನ್ನು ಹೊಂದದೇ ಸರಳತೆಯಿಂದ ನಡೆದುಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಟೀ ಕಪ್ ಗಳನ್ನು ತೆಗೆದುಕೊಂಡು ಹಾಕಿದ ನಾಸರ್  ಕಸದ ಬುಟ್ಟಿಗೆ ಹಾಕಿದ್ದು, ಈ ಫೋಟೋ ಈಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿದೆ.

ಸ್ವಚ್ಚ ಭಾರತ  ಅಭಿಯಾನ ಶುರುವಾಗಿ ಇಡೀ ದೇಶದಲ್ಲಿ ನಮೋ ಸಂದೇಶಗಳು ಬಿತ್ತರವಾಗಿರುವಲ್ಲಿ ನಾಸರ್ ಕೂಡಾ ಪ್ರಭಾವಿತರಾಗಿ ತಾವು ಇದ್ದೆಡೆ, ಹೋದೆಡೆ ಸ್ವಚ್ಛತೆಯನ್ನೇ ಬಯಸುತ್ತಾರೆ…, ಮತ್ತು ಅದಕ್ಕಾಗಿ ಶ್ರಮಿಸುತ್ತಾರೆ.

Tags

Related Articles