ಸುದ್ದಿಗಳು

ಇಂಡಿಯನ್ ಐಡಲ್ ಶ್ರೀರಾಮ್ ಜೊತೆ ಮಂಚದ ನಟಿ ಪೋಟೋ ವೈರಲ್!

ಇತ್ತೀಚಿಗೆ ತೆಲುಗು ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ವಿಷಯ ಬಾರೀ ಸುದ್ದಿ ಮಾಡುತ್ತಿರುವುದನ್ನು ನಾವು ಗಮನಿಸುತ್ತಲೇ ಇದ್ದೇವೆ. ಈ ಹಿನ್ನೆಲೆಯಲ್ಲಿ ಟಾಲಿವುಡ್ ನ ಹಾಟ್ ಬೆಡಗಿ ಶ್ರೀರೆಡ್ಡಿಯವರು ಕೆಲದಿನಗಳ ಹಿಂದೆ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಮಂಚ ಹೇರಲೇಬೇಕು ಎನ್ನುವ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಮತ್ತು ಈ ಕುರಿತು ನಾನು ನ್ಯಾಯ ಸಿಗುವ ತನಕ ನಾನು ಬಿಡುವುದಿಲ್ಲ ಎಂದು ಚಿತ್ರಮಂಡಳಿ ಮೊರೆ ಹೋಗಿದ್ದಾರೆ.

ಈ ಕುರಿತು ಇವರ ಪರ ಹಾಗು ವಿರೋಧವಾಗಿ ಹಲವಾರು ಟೀಕೆ ಟಪ್ಪಣೆಗಳಿಗೆ ಬಂದಿದ್ದರೂ, ಶ್ರೀರೆಡ್ಡಿಯವರು ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ನಿಲುವಿನ ಮೇಲೆ ನಿಂತಿದ್ದಾರೆ. ಜೊತೆಗೆ ಒಂದು ವೇಳೆ ಚಿತ್ರಮಂಡಳಿಯವರು ನನ್ನ ಆರೋಪವನ್ನು ಪರಿಶೀಲಿಸದೇ ಇದ್ದಲ್ಲಿ ನಾನು ಅಂತರಾಷ್ಟ್ರಿಯ ಮಟ್ಟದ ಮಾಧ್ಯಮಗಳ ಮೊರೆ ಹೋಗುತ್ತೇನೆ ಎಂದು ದಿಟ್ಟತನ ಮೆರೆದಿದ್ದಾರೆ.

ಪ್ರಸ್ತುತ ಶ್ರೀರೆಡ್ಡಿಯವರು ತಮ್ಮ ಶ್ರೀ ಲೀಕ್ಸ್ ಮೂಲಕ ಕ್ಯಾಸ್ಟಿಂಗ್ ಕೌಚ್ ವಿಚಾರದಲ್ಲಿ ಬಾಂಬ್ ಸಿಡಿಸಿದ್ದಾರೆ. ಗಂಟೆಯ ಹಿಂದೆ ಬಿಸಿ ಬಿಸಿಯಾಗಿ ವಿವಾದಾಸ್ಪದ ನಟಿ ಶ್ರೀರೆಡ್ಡಿಯವರು ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ‘ನೋಡಿ ಇಂಡಿಯನ್ ಐಡಿಯಲ್ ಚಾಟ್… ಫೇಮ್ ಆನ್ ಯು ಶ್ರೀರಾಮ್’ ಅನ್ನೋ ಟ್ಯಾಗ್ ಲೈನ್ ಮೂಲಕ ಲೇಟೆಸ್ಟ್ ಇಂಡಿಯನ್ ಐಡಲ್ ವಿನ್ನರ್ ಹಾಗು ಸಿಂಗರ್ ಶ್ರೀರಾಮ್ ಅವರ ಜೊತೆಗೆ ನಟಿ ಶ್ರೀರೆಡ್ಡಿಯವರು ತಮ್ಮ ವಾಟ್ಸ್ ಆಪ್ ಮೂಲಕ ಹಾಟ್ ಚಾಟಿಂಗ್ ಮಾಡಿರುವ ಪೋಟೊವನ್ನು ಸ್ಕ್ರೀನ್ ಶಾಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.

ಹಾಗು ಇನ್ನು ಹಲವು ನಟರೊಂದಿಗೆ ಈ ರೀತಿಯ ಸಾಕ್ಷಿಗಳಿವೆ ಎಂದು ಹೇಳಿಕೆ ನೀಡುವುದರ ಮೂಲಕ ಮುಂದಿನ ದಿನಗಳಲ್ಲಿ ಅವುಗಳನ್ನು ಬಹಿರಂಗಪಡಿಸುತ್ತೇಂದು ಹೇಳಿಕೆ ನೀಡಿರುವ ನಟಿ ಶ್ರೀರೆಡ್ಡಿ ಪ್ರಸ್ತುತ ಈ ವಿಷಯಕ್ಕೆ ಸಂಭಂದಿಸಿದಂತೆ ಸಂಚಲನ ಮೂಡಿಸಿದ್ದಾರೆ.

Tags

Related Articles