ಸುದ್ದಿಗಳು

ರಾಘವ ಲಾರೆನ್ಸ್ ವಿರುದ್ಧ ಸಮರ ಸಾರಿದ ಶ್ರೀರೆಡ್ಡಿ…!

ಕಾಸ್ಟಿಂಗ್ ಕೌಚ್ ವಿರುದ್ಧ ನಿಂತ ಟಾಲಿವುಡ್ ನಟಿ

ಹೈದರಾಬಾದ್, ಸೆ.11: ಇಷ್ಟು ದಿನ ಕಾಸ್ಟಿಂಗ್ ಕೌಚ್ ವಿಚಾರವಾಗಿ ಸಮರ ಸಾರಿದ್ದ ಶ್ರೀರೆಡ್ಡಿ ಇದೀಗ ನಟ ರಾಘವ ಲಾರೆನ್ಸ್ ಮೇಲೂ ಗಂಭೀರ ಆರೋಪ ಮಾಡಿದ್ದಾರೆ.

ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಮರ ಸಾರಿದ್ದ ಶ್ರೀರೆಡ್ಡಿಯ ಹೋರಾಟ ಇನ್ನು ನಿಂತಿಲ್ಲ. ಒಬ್ಬರಲ್ಲ ಒಬ್ಬರಂತೆ,  ನಟ, ನಿರ್ಮಾಪಕ, ನಿರ್ದೇಶಕರ ಬಂಡವಾಳ ಬಯಲು ಮಾಡುತ್ತಲೇ ಇದ್ದಾರೆ. ಈಗಾಗಲೇ ಅನೇಕ ಸಿನಿಮಾ ಮಂದಿಯ ಮೇಲೆ ಆರೋಪ ಮಾಡುತ್ತಿರುವ ಶ್ರೀರೆಡ್ಡಿ ಸದ್ಯ  ಕಾಲಿವುಡ್ ನಟ, ನಿರ್ಮಾಪಕ ಹಾಗೂ ಕೋರಿಯೋಗ್ರಫರ್ ರಾಘವ ಲಾರೆನ್ಸ್ ಅವರ ಮೇಲೆ  ಆರೋಪ ಮಾಡುತ್ತಿದ್ದಾರೆ.ರಾಘವ ಲಾರೆನ್ಸ್  ವಿರುದ್ಧ ಶ್ರೀರೆಡ್ಡಿ ಗಂಭೀರ ಆರೋಪ

ಹೌದು, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಒಂದು ತರಹದ ಅಲ್ಲೋಲ ಕಲ್ಲೋಲ ಸೃಷ್ಟಿಸಿದ  ನಟಿ ಶ್ರೀರೆಡ್ಡಿ. ಇವರು ಮಾಡಿದ ಆರೋಪ, ಪ್ರತಿಭಟನೆ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ತಿರುವನ್ನೇ ಪಡೆದುಕೊಂಡಿದೆ.ಯಾಕೆಂದರೆ ಇವರು ಮಾತನಾಡಿದ ನಂತರದಲ್ಲಿ ಅನೇಕ ನಟಿಮಣಿಯರು ಕಾಸ್ಟಿಂಗ್ ಕೌಚ್ ಭೂತದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪ್ರತಿಭಟನೆಗಳ ನಂತರ ಈ ನಟಿ ಸುಮ್ಮನಾಗಿರಲಿಲ್ಲ. ಅವರಿಗೆ ಮೋಸ ಮಾಡಿದ್ದ ಪ್ರತಿಯೊಬ್ಬರ ಬಂಡವಾಳವನ್ನು ಬಯಲು ಮಾಡಿದ್ದರು.

ಹುಡುಗಿಯರನ್ನು ರೆಸಾರ್ಟ್ ಗೆ ಕರೆ ತರುತ್ತಿದ್ದರಂತೆ ರಾಘವ್ ..?

ಕೆಲ ದಿನಗಳ ಹಿಂದೆಯಷ್ಟೆ ರಾಘವ್ ರಾಲೆನ್ಸ್ ಬಗ್ಗೆ ಶ್ರೀರೆಡ್ಡಿ ಗಂಭೀರ ಆರೋಪವೊಂದನ್ನು ಮಾಡಿದ್ದರು. ನನ್ನನ್ನ ಬಳಸಿಕೊಳ್ಳುವ ಯತ್ನ ಮಾಡಲಾಗಿತ್ತು ಎಂದಿದ್ದರು. ಇದೀಗ ಇವರ ಮೇಲೆ ಇನ್ನೊಂದು ಆರೋಪ ಮಾಡಿದ್ದಾರೆ. ರಾಘವ ಕೆಲ ಹುಡುಗಿಯರನ್ನು ರೆಸಾರ್ಟ್ ಗೆ ಕರೆ ತರುತ್ತಿದ್ದರು. ಹತ್ತಕ್ಕೂ ಅಧಿಕ ಹುಡುಗಿರನ್ನು ಕರೆ ತಂದಿರುವುದನ್ನು ನಾನು ನೋಡಿದ್ದೇನೆ ಅನ್ನುವುದನ್ನು  ಶ್ರೀರೆಡ್ಡಿ ಅಭಿಮಾನಿಯೊಬ್ಬರು ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್  ಚಾಟ್ ಅನ್ನು ಶ್ರೀರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಶ್ರೀರೆಡ್ಡಿ ರಾಘವ್ ಲಾರೆನ್ಸ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

Tags