ಸುದ್ದಿಗಳು

ನಾಗ ಚೈತನ್ಯ ಮತ್ತು ಸಮಂತಾ ಕೈಯಲ್ಲಿರುವ ಒಂದೇ ರೀತಿ ಟ್ಯೂಟುವಿನ ವಿಶೇಷವೇನು ಗೊತ್ತಾ?

ಬಾಲಿವುಡ್ ನ ಬ್ಯೂಟಿಫುಲ್ ಹಾಗೂ ಚಾರ್ಮಿಂಗ್ ಆಕ್ಟರ್ ಸಮಂತಾ , ನಿರ್ದೇಶಕರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಟಾಲಿವುಡ್ ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ಸಮಂತಾ, ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರ ಮೆಚ್ಚುಗೆ ಪಾತ್ರರಾಗಿದ್ದಾರೆ. 8 ವರ್ಷದ ತಮ್ಮ ಪ್ರೀತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದ ಸಮಂತಾ ಚೈತನ್ಯ ಅಕ್ಕಿನೇನಿಯನ್ನು ಮದುವೆಯಾದ ಬಳಿಕ ಇದೀಗ ತೆಲುಗು ಚಿತ್ರರಂಗದ ಸೊಸೆ ಕೂಡ ಹೌದು.ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಮಾತನಾಡಿದ ಸಮಂತಾ, ತಮ್ಮ ಕೈಯಲ್ಲಿರುವ ಟ್ಯಾಟು ಕುರಿತ ರಹಸ್ಯವನ್ನು ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಕೈಯಲ್ಲಿ ಮೇಲೂ ಒಂದೇ ರೀತಿಯ  ಟ್ಯೂಟೂ ಇದೆ.

ಈ ಟ್ಯಾಟು ಸತ್ಯದ ಸೂಚಕ ಹಾಗೂ ಜೋಡಿಗಳನ್ನು ಸೂಚಿಸುತ್ತದೆ. ಹೀಗಾಗಿ ನಾವು ಪ್ರೀತಿಸುತ್ತಿರುವಾಗ ಯಾವುದೇ ನಾಟಕವಿಲ್ಲದೆ, ನೈಜವಾಗಿರಲು ಬಯಸಿದೆವು. ಹೀಗಾಗಿ ಈ ಟ್ಯಾಟು ಹಾಕಿಸಿಕೊಂಡಿದ್ದೇವೆ ಎಂದಿದ್ದಾರೆ ಸಮಂತಾ ಮತ್ತು ನಾಗ ಚೈತನ್ಯ.

Tags