ಸುದ್ದಿಗಳು

ಸಿನಿರಂಗಕ್ಕೆ ಗುಡ್ ಬೈ ಹೇಳಲಿರುವ ಸಮಂತಾ…?

ಪ್ರಸಕ್ತ ವರ್ಷ ನಟಿ ಸಮಂತಾ ಅಕ್ಕಿನೇನಿ ಪಾಲಿಗೆ ಶುಭದಾಯಕವಾಗಿದೆ. ವರ್ಷದ ಮೊದಲ ಅರ್ಧದಲ್ಲೇ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಸಮಂತಾ ಅವರದ್ದು. ರಾಮ್ ಚರಣ್ ಅವರ ರಂಗಸ್ಥಳಂ, ಸಾವಿತ್ರಿ ಬಯೋಪಿಕ್ ಮಹಾನಟಿ ಮತ್ತು ವಿಶಾಲ್ ಜೊತೆಗಿನ, ಇರುಂಬು ತಿರೈ ಚಿತ್ರ ಒಂದರ ಹಿಂದೊಂದರಂತೆ ಸಾಲಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದಲ್ಲದೆ, ದಕ್ಷಿಣ ಭಾರತದ ಚೆಲುವೆಯೊಬ್ಬಳು ಮದುವೆಯ ನಂತರವೂ ಸಿನಿರಂಗದಲ್ಲಿ ಬೇಡಿಕೆ ಉಳಿಸಿಕೊಳ್ಳಬಲ್ಲಳ್ಳು ಎಂಬುದನ್ನು ದಕ್ಷಿಣ ಚಿತ್ರರಂಗದಲ್ಲಿ ಸಾಬೀತು ಮಾಡಿದ್ದಾರೆ.

ತಮ್ಮ ಹಿಟ್ ಚಿತ್ರಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಮಂತಾ ನಾನು ಈ ಪ್ರಪಂಚದಲ್ಲಿ ಅತ್ಯಂತ ಲಕ್ಕಿಯೆಸ್ಟ್ ಪರ್ಸನ್ ಎಂದು ತನ್ನನ್ನು ತಾನೇ ಸ್ವಯಂ ಘೋಷಿಸಿಕೊಂಡಿದ್ದರು. ನಾಗ ಚೈತನ್ಯರನ್ನು 2017 ರಲ್ಲಿ ಮದುವೆಯಾದಾಗ ಸಿನಿ ಕ್ಷೇತ್ರದಲ್ಲಿ ಸಮಂತಾ ಇನ್ನೂ ಚಿತ್ರರಂಗದಿಂದ ದೂರವೇ ಉಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದಾದ ಬಳಿಕವೂ ಆಕೆ ಚಿತ್ರರಂಗದಲ್ಲಿ ಸಕ್ರಿಯವಾಗಿಯೇ ಉಳಿದಿದ್ದಾರೆ.Related imageಇದೀಗ ಬಂದಿರುವ ಸುದ್ದಿಯ ಪ್ರಕಾರ ಸಮಂತಾ 2019 ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನಲಾಗಿದೆ. ಹೀಗಾಗಿ ಮಾರ್ಚ್ 2019 ರ ಒಳಗೆ ತಮ್ಮ ಚಿತ್ರಗಳನ್ನೆಲ್ಲಾ ಮುಗಿಸಲು ಯೋಚಿಸಿದ್ದಾರಂತೆ . ಸೀಮಾ ರಾಜಾ, ಸೂಪರ್ ಡಿಲಕ್ಸ್ ಮತ್ತು ತಮಿಳು-ತೆಲುಗು ಭಾಷೆಯಲ್ಲಿ ಮೂಡಿಬರುತ್ತಿರುವ ಯು-ಟರ್ನ್ ಚಿತ್ರಗಳಲ್ಲಿ  ಆಕೆ ನಟಿಸುತ್ತಿದ್ದು, ಚಿತ್ರವನ್ನು ಬೇಗ ಮುಗಿಸುವ ತರಾತುರಿಯಲ್ಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಮಂತಾ, ತಾನು ಮಗುವಾದ ಬಳಿಕ ಸಿನಿಮಾ ಇಂಡಸ್ಟ್ರೀಯಿಂದ ದೂರವಿರುವುದಾಗಿ ಹೇಳಿದ್ದರು. ನಾನು ತಾಯಿಯಾದ ಬಳಿಕ ಆ ಮಗು ನನ್ನ ಪ್ರಪಂಚದಲ್ಲೇ ಬೆಳೆಯಬೇಕು. ನನಗೆ ಆವಾಗ ದೊಡ್ಡ ಜವಾಬ್ದಾರಿ ಇರುತ್ತದೆ. ನನ್ನ ಬಾಲ್ಯ ಅಷ್ಟೊಂದು ಸುಂದರವಾಗಿರಲಿಲ್ಲ. ಹೀಗಾಗಿ ನನ್ನ ಮಗುವಿಗೆ ಸುಂದರ ಬಾಲ್ಯವನ್ನು ಕೊಡಬೇಕು ಎಂಬುದು ನನ್ನ ಕನಸು. ಹೀಗಾಗಿ ಮಗುವಾದ ಕೆಲವು ವರ್ಷಗಳ ಕಾಲ ನಾನು ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದಿದ್ದರು ಸಮಂತಾ ಎಂದು ಸುದ್ದಿಯಾಗಿದೆ.

Tags

Related Articles

Leave a Reply

Your email address will not be published. Required fields are marked *