ಸುದ್ದಿಗಳು

ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನ ಗಿಟ್ಟಿಸಿಕೊಂಡ ‘ಶೈಲಜ ರೆಡ್ಡಿ ಅಲ್ಲುಡು’ ಟ್ರೇಲರ್…!

ಟ್ರೇಲರ್ ನಲ್ಲಿಯೇ ಭರವಸೆ ಮೂಡಿಸುತ್ತಿರುವ ಸಿನಿಮಾ

ಒಂದು ನಿಮಿಷ 48 ಸೆಕೆಂಡುಗಳಲ್ಲಿ ಮೂಡಿಬಂದಿರುವ ಟ್ರೈಲರ್,ತೆರೆ ಮೇಲೆ ಸುಂದರವಾಗಿ ಮೂಡಿಬಂದಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ 2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಹೈದರಾಬಾದ್, ಸೆ.01: ಇತ್ತಿಚೆಗೆ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ಶೈಲಜ ರೆಡ್ಡಿ ಅಲ್ಲುಡು’. ಹೌದು, ಎಲ್ಲೆಡೆ ಈ  ಸಿನಿಮಾದ ಹಾಡುಗಳು ಮತ್ತು ಟ್ರೈಲರ್  ಭಾರಿ ಸುದ್ದಿ ಮಾಡುತ್ತಿವೆ. ನಾಗ ಚೈತನ್ಯ ಮತ್ತು ಅನು ಎಮ್ಯಾನುಯೆಲ್ ಹಾಗೂ ರಮ್ಯಾ ಕೃಷ್ಣನ್ ಅಭಿನಯದ ‘ಶೈಲಜ ರೆಡ್ಡಿ ಅಲ್ಲುಡು’  ಸಿನಿಮಾದ ಟ್ರೈಲರ್,ಆಗಸ್ಟ್ 30 ರಂದು ಬಿಡುಗಡೆಯಾಗಿ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನ ಗಿಟ್ಟಿಸಿಕೊಂಡಿದೆ.


ಒಂದು ನಿಮಿಷ 48 ಸೆಕೆಂಡುಗಳಲ್ಲಿ ಮೂಡಿಬಂದಿರುವ ಟ್ರೈಲರ್ ತೆರೆ ಮೇಲೆ ಸುಂದರವಾಗಿ ಮೂಡಿಬಂದಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ 2 ಮಿಲಿಯನ್ ವೀಕ್ಷಣೆ ಪಡೆದು ಕೊಂಡಿದೆ. ಈ ಸಿನಿಮಾದಲ್ಲಿ ನಾಗ ಚೈತನ್ಯ  ಆಲಿಯಾಸ್ ಚೈತು ನಾಯಕನಾಗಿ ಕಾಣಿಸಿಕೊಂಡಿದ್ದು, ಚೈತುಗೆ ಜೋಡಿಯಾಗಿ ಅನು ಎಮ್ಯಾನುಯೆಲ್ ಅಭಿನಿಯಸಿದ್ದಾರೆ. ಅನು ರವರ ತಾಯಿಯಾಗಿ ರಮ್ಯಾಕೃಷ್ಣ ಜಬರ್ ದಸ್ತಾ ಆಗಿ ನಟಿಸಿದ್ದಾರೆ.  ಅಮ್ಮ ಮತ್ತು ಮಗಳ ನಡುವೆ ಸಿಲುಕಿಕೊಂಡ ಪಾತ್ರದಲ್ಲಿ ನಾಗ ಚೈತನ್ಯ ಚೆನ್ನಾಗಿ ಅಭಿನಯಸಿದ್ದಾರೆ.ಚಿತ್ರತಂಡ

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಟ್ರೈಲರ್ ,ಹಾಸ್ಯ ಮತ್ತು ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಈ ಚಿತ್ರವನ್ನು ನಿರ್ದೇಶಕ ಮಾರುತಿ ತೆರೆಯ ಮೇಲೆ ಸುಂದರವಾಗಿ ಮೂಡಿಸಿದ್ದಾರೆ. ನಿರ್ಮಾಪಕರಾಗಿ ಎಸ್ ರಾಧಕೃಷ್ಣ, ಪಿ.ಡಿ.ವಿ.ಪ್ರಸಾದ್ ,ಸುರೇಶ್ ನಾಗ ವಂಶಿ ಈ ಸಿನಿಮಾಗಿ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತವನ್ನು ನೀಡಿದ್ದು, ಹಾಡುಗಳು ಕೇಳಲು ಸುಮಧುರವಾಗಿದೆ

Tags

Related Articles