ಸುದ್ದಿಗಳು

‘ಈಗ’ ಚಿತ್ರದ  ಪ್ರೊಡಕ್ಷನ್ ಮ್ಯಾನೇಜರ್  ಪ್ರೀತಿಯ ಬಲೆಗೆ ಗಾಯಕಿ!

ಎರಡು ವರ್ಷಗಳ ಪ್ರೀತಿಯ ಬೆಸುಗೆ  ಕರೆದೊಯ್ಯಿತೇ…. ನಿಶ್ಚಿತಾರ್ಥದವರೆಗೂ..!

ಎಸ್ ಎಸ್ ರಾಜಮೌಳಿ ಅವರ ಮಗನಾದ ಕಾರ್ತಿಕೇಯ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಜಗಪತಿ ಬಾಬು ಅವರ ಸಂಬಂಧಿಯಾದ  ಪೂಜಾ ಪ್ರಸಾದ್  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೈದರಾಬಾದ್ , ಸೆ.06: ತೆಲುಗು ಚಿತ್ರರಂಗದಲ್ಲಿ ‘ಬಾಹುಬಲಿ’ ಯಂತಹ ಸಿನಿಮಾ ಮೂಲಕ ಸಂಚಲನವನ್ನು ಸೃಷ್ಟಿಮಾಡಿದ ನಿರ್ದೇಶಕ ಎಸ್ ಎಸ್ ರಾಜಮೌಳಿ. ‘ಸ್ಟೂಡೆಂಟ್ ನಂ 1’ ಸಿನಿಮಾ ಮೂಲಕ ನಿರ್ದೇಶಕರಾದ ಇವರು, ಇಲ್ಲಿಯವರೆಗೂ ಹಲವಾರು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇದೀಗ ಹೊಸ ವಿಷಯದಿಂದ ಸುದ್ದಿಗೆ ಬಂದಿದ್ದಾರೆ . ಅದು ಏನು ಅಂತೀರಾ? ಇಲ್ಲಿದೆ ನೋಡಿ.

ಸಮಾರಂಭದಲ್ಲಿ ಹಲವಾರು ಗಣ್ಯರ ದಂಡು

ಎಸ್ ಎಸ್ ರಾಜಮೌಳಿ ಅವರ ಮಗನಾದ ಕಾರ್ತಿಕೇಯ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಜಗಪತಿ ಬಾಬು ಅವರ ಸಂಬಂಧಿಯಾದ  ಪೂಜಾ ಪ್ರಸಾದ್  ಜೊತೆಗೆ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಾರ್ತಿಕೇಯ ಮತ್ತು ಪೂಜಾ ಎರಡು ವರ್ಷಗಳ ಪ್ರೀತಿಯ ಬೆಸುಗೆ  ಇದೀಗ ನಿಶ್ಚಿತಾರ್ಥದವರೆಗೂ ಬಂದು ನಿಂತಿದೆ.  ನಿನ್ನೆ ತಾನೆ  ಎಸ್ ಎಸ್ ರಾಜಮೌಳಿಯವರ ಮನೆಯಲ್ಲಿ ಅದ್ದೂರಿ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಆ ಕಾರ್ಯಕ್ರಮದಲ್ಲಿ  ಹಲವಾರು ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು. ನಾಗಾರ್ಜುನ ಅವರ ಮಗ ಅಖಿಲ್ ಅಕ್ಕಿನೇನಿಯು ಸಹ ಸಮಾರಂಭದಲ್ಲಿ ಪಾಲ್ಗೊಂಡು ವಧು ವರರಿಗೆ ಶುಭಾಷಯ ಕೋರಿದ್ದಾರೆ.ಕಾರ್ತಿಕೇಯ ಕೂಡ ತೆಲುಗು ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ‘ಬಾಹುಬಲಿ 2’ ಸಿನಿಮಾಗಾಗಿ ಸೆಕೆಂಡ್ ಯೂನಿಟ್ ಡೈರೆಕ್ಟರ್ , ‘ಯುದ್ಧಂ ಶರಣಂ’ ಸಿನಿಮಾದಲ್ಲಿ ಲೈನ್ ಪ್ರೋಡ್ಯೂಸರ್ ಹಾಗೂ ‘ಈಗ’ ಚಿತ್ರದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಇನ್ನೂ ಮುಂದಿನ ದಿನಗಳಲ್ಲಿ ತಂದೆಯ ಜೊತೆಗೆ ಕೆಲಸ ಮಾಡುವ ಹಂಬಲ ಹೊಂದಿದ್ದಾರೆ. ಪೂಜಾ ಪ್ರಸಾದ್ ಕೂಡಾ ಸಂಗೀತ ಲೋಕದಲ್ಲಿ ಒಳ್ಳೆಯ ಗಾಯಕಿಯಾಗಿ ಹೆಸರು ಮಾಡಿದ್ದಾರೆ.

Tags