ಸುದ್ದಿಗಳು

‘ಯು ಟರ್ನ್’ ಮೊದಲ ನೋಟದಲ್ಲಿ ಸಮಂತಾ ವೈಲೆಂಟ್ ಲುಕ್ !!

ಬೆಂಗಳೂರು, ಜು.22: ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ, ಯು-ಟರ್ನ್ ಎನ್ನುವ ಚಿತ್ರ ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರದರ್ಶನಗೊಳ್ಳುವುದರ ಜೊತೆಗೆ ಸಾಕಷ್ಟು ಯಶಸ್ಸು ಗಳಿಸಿತ್ತು. ಸದ್ಯ  ಚಿತ್ರ ಟಾಲಿವುಡ್ ಹಾಗೂ ಕಾಲಿವುಡ್ ಗೆ ರಿಮೇಕ್ ಆಗುತ್ತಿದೆ ಎನ್ನುವುದು ತಿಳಿದ ವಿಷಯ. ಟಾಲಿವುಡ್ ನಲ್ಲಿಯೂ ಸಹ ಯು-ಟರ್ನ್ ಎಮದೇ ನಾಮಕರಣ ಮಾಡಲಾಗಿದ್ದು, ಈಗ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಸ್ವತಃ ಸಮಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡದ ನಿರ್ದೇಶಕ

ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ  ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಪ್ರದರ್ಶನಗೊಳ್ಳಲು ತಯಾರಿ ನಡೆಸುತ್ತಿರುವ  ಚಿತ್ರಕ್ಕೆ. ಕನ್ನಡದ ಖ್ಯಾತ ನಿರ್ದೇಶಕ ಪವನ್ ಕುಮಾರ್ ಯಾಕ್ಷನ್ ಕಟ್ ಹೇಳಲಿದ್ದಾರೆ. ಮುಖ್ಯ ಪಾತ್ರದಲ್ಲಿ ದಕ್ಷಿಣ ಭಾರತದ ಕ್ಯೂಟ್ ಬೆಡಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಬರುವ ಸೆಪ್ಟಂಬರ್ 13ಕ್ಕೆ ಬೆಳ್ಳಿ ಪರದೆಯ ಮೇಲೆ ಈ ಚಿತ್ರವನ್ನು ಕಾಣಬಹುದು.

Tags

Related Articles

Leave a Reply

Your email address will not be published. Required fields are marked *