ಸುದ್ದಿಗಳು

ಸಿನಿಮಾಗಾಗಿ ಸೈನ್ಯ ಸದಸ್ಯತ್ವ ಕೋರಿದ ಅಲ್ಲು ಅರ್ಜುನ್ !

ಅಲ್ಲು ಅರ್ಜುನ್ ಸೇನೆ ಸೇರಬೇಕು ಎಂಬ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದಾರಂತೆ ! ಅರೆ, ಹಾಗಿದ್ದರೆ ಅವರು ಸಿನಿಮಾ ರಂಗ ತೊರೆದು ಸೇನೆಗೆ ಸೇರುತ್ತಾರಾ? ಇಲ್ಲ. ಅವರು ಅರ್ಜಿ ಸಲ್ಲಿಕೆ ಮಾಡಿದ್ದು, ಸೇನಾ ಸದಸ್ಯತ್ವ ಕೋರಿ.

ಹೌದು, ಇತ್ತೀಚಿನ ದಿನಗಳಲ್ಲಿ ಸೇನೆಯ ವಿಚಾರವಾಗಿ, ಸೇನೆಯ ಫೇವರ್ ಆಗಿ ಹಾಗೂ ಸೇನೆಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ಎಲ್ಲಾ ಸಿನಿಮಾಗಳು ಹೆಚ್ಚು ಕಡಿಮೆ ಹಿಟ್ ಆಗಿವೆ. ಇದೀಗ ಅಲ್ಲು ಅರ್ಜುನ್ ಕೂಡ ಸೈನ್ಯ ಸೇರಲು ಮುಂದಾಗಿದ್ದಾರೆ. ಸೈನಿಕ ಪಾತ್ರದ ಸಿನಿಮಾದಲ್ಲಿ ಮಿಂಚಲು ಅಲ್ಲು ರೆಡಿಯಾಗಿದ್ದಾರಂತೆ.

ಹೌದು, ಅಲ್ಲು ಅರ್ಜುನ್ ನಟನೆಯ ‘ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದ ಹೊರತಾಗಿಯೂ ಬಾಕ್ಸ್ ಆಫೀಸ್‌ ನಲ್ಲಿ ೮೫ ಕೋಟಿ ರೂ. ಕಲೆಕ್ಷನ್ ಮಾಡಿದೆ.ಸೂರ್ಯ ಯೋಧನೊಬ್ಬನ ಕುರಿತು ಮಾಡಿರುವ ಚಿತ್ರ. ಅದಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಕೂಡ ನಡೆಸಿದ್ದರು. ಸೇನೆಯಲ್ಲಿ ಸೈನಿಕರಿಗೆ ನೀಡುವ ಕೆಲ ತರಬೇತಿಗಳನ್ನು ಪಡೆದುಕೊಂಡಿದ್ದರು. ಅಲ್ಲದೆ, ಮೈ ಕೊರೆಯುವ ಕಾಶ್ಮೀರದ ಚಳಿಯಲ್ಲಿ ಶೂಟಿಂಗ್ ನಡೆಸಿದ್ದರು. ಈ ವೇಳೆ ಅವರಿಗೆ ಸೈನಿಕರ ನಿಜವಾದ ಕಷ್ಟ ಅರ್ಥವಾಗಿತ್ತಂತೆ. ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಸಿನಿಮಾ ಶೂಟ್ ಮಾಡಲಾಗಿದೆ.

ಸೈನಿಕರಿಗೆ ದೇಶ ಕಾಯುವುದು ಎಷ್ಟು ಕಷ್ಟದ ಕೆಲಸ ಎಂಬುದು ನನಗೆ ಆಗ ಅರಿವಾಯಿತು. ಹಾಗಾಗಿ ನಾನು ಸೇನೆಯ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಅದನ್ನು ಭಾರತೀಯ ಸೇನೆ ಸ್ವೀಕರಿಸಲಿದೆ ಎಂದು ನಾನು ನಂಬಿದ್ದೇನೆ’ ಎಂಬುದು ಅಲ್ಲು ಅರ್ಜುನ್ ಮಾತು. ಮಲಯಾಳಂ ನಟ ಮೋಹನ್‌ಲಾಲ್, ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ, ಶೂಟರ್ ಅಭಿನವ್ ಬಿಂದ್ರ ಸೇರಿ ಅನೇಕರಿಗೆ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಸ್ಥಾನ ನೀಡಿ ಗೌರವಿಸಿದೆ.

ಸದ್ಯ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಅವರು ಕೊರಟಾಲ ಶಿವ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆಯಾದರೂ ಈ ಒಪ್ಪಂದ ಮುರಿದು ಬಿದ್ದಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

 

Tags

Related Articles

Leave a Reply

Your email address will not be published. Required fields are marked *