ಸುದ್ದಿಗಳು

ಮದುವೆ ಮುಂಚಿನ ಸಂಬಂಧದ ಕುರಿತಂತೆ ಮಾತನಾಡಿದ ಸಮಂತಾ….

ಬಹು ಬೇಡಿಕೆಯ ನಟಿ

ನಟಿ ಸಮಂತಾ, ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರೀಯಲ್ಲಿ ಅತೀ ಬೇಡಿಕೆ ಉಳಿಸಿಕೊಂಡಿರುವ ಲಕ್ಕಿ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಮದುವೆಯ ನಂತರವೂ ಆಕೆಯನ್ನು ಚಿತ್ರರಂಗ ಕೈ ಬಿಟ್ಟಿಲ್ಲ. ಅವರು ನಟಿಸಿದ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿದ್ದರಿಂದ ಸಮಂತಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ರಂಗಸ್ಥಳಂ, ಮಹಾನಟಿ ಮತ್ತು ‘ಇರುಂಬು ತಿರೈ’ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ್ದರಿಂದ ಖುಷಿಯಾಗಿರುವ ನಟಿ ತಾನು ಲಕ್ಕಿಯೆಸ್ಟ್ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದರು.

ಹಲವು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿರುವ ಸಮಂತಾ , ಪತಿ ನಾಗಚೈತನ್ಯ ಅವರ ಜೊತೆಗೂ ತೆರೆ ಹಂಚಿಕೊಂಡಿರುವ ಸಮಂತಾ ಅವರ ಯು-ಟರ್ನ್ ಚಿತ್ರ ಇದೀಗ ಕುತೂಹಲ ಕೆರಳಿಸಿದೆ.ಪ್ರೀತಿ ಹುಚ್ಚಿಗೆ ಬಿದ್ದು ಸಂಕಷ್ಟ ಎದುರಿಸಿದೆ

ಮಹಾನಟಿ ಚಿತ್ರದಲ್ಲೂ ಸಮಂತಾ ನಟಿಸಿದ್ದು, ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ, ತಮ್ಮ ವೃತ್ತಿ ಜೀವನದ ಕುರಿತಂತೆ ವಿವರಿಸಿದ್ದಾರೆ. ನಾನು ನಿಜಕ್ಕೂ ದೇವರ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದಿರುವ ಸಮಂತಾ, ಮಹಾನಟಿ ಚಿತ್ರದಲ್ಲಿನ ಜೆಮಿನಿ ಗಣೇಶನ್ ಪಾತ್ರಕ್ಕೂ ತಮ್ಮ ಹಳೆಯ ಬಾಯ್ ಪ್ರೇಂಡ್ ಗೂ ಹೋಲಿಕೆ ಮಾಡಿದ್ದಾರೆ. ಚಿತ್ರದ ಗಣೇಶನ್ ಅವರ ವಿವಾಹೇತರ ಸಂಬಂಧಗಳ ಕುರಿತಂತೆ ಮಾತನಾಡಿದ ಅವರು, ನಾನು ಕೂಡ ನನ್ನ ವೈಯಕ್ತಿಕ ಜೀವನದಲ್ಲಿ ಪ್ರೀತಿ ಹುಚ್ಚಿಗೆ ಬಿದ್ದು ಸಂಕಷ್ಟ ಎದುರಿಸಿದ್ದೆ. ಆದರೆ ಕೂಡಲೇ ನಾನು ಎಚ್ಚೆತ್ತುಕೊಂಡಿದ್ದರಿಂದ ಈ ಸಮಸ್ಯೆಯಿಂದ ಪಾರಾದೆ. ನಾನು ಆ ಸಂಬಂಧದಲ್ಲಿ ಮುಂದುವರೆದಿದ್ದರೆ ಕೆಟ್ಟದಾದ ಅನುಭವ ನನಗಾಗುತ್ತಿತ್ತು. ಈ ಬಗ್ಗೆ ನನಗೆ ಆರಂಭದಲ್ಲಿ ತಿಳಿದಿದ್ದರಿಂದ ನಾನು ದೂರವಾದೆ ಎಂದು ಹೆಸರು ಹೇಳದೆಯೇ ತನ್ನ ಹಳೆಯ ಗೆಳೆಯ ಸಿದ್ದಾರ್ಥ್ ಬಗ್ಗೆ ಮಾತನಾಡಿದ್ದಾರೆ ಸಮಂತಾ. ಅಲ್ಲದೆ ನಾಗಚೈತನ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದಿದ್ದಾರೆ.

ಇನ್ನೂ ಚಿತ್ರಗಳ ಬಗ್ಗೆ ಗಮನಿಸುವುದಾದರೆ ಸಮಂತಾ ಸೀಮಾ ರಾಜ್ ಎಂಬ ತೆಲುಗು ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Tags

Related Articles