ಸುದ್ದಿಗಳು

ಶ್ರೀರೆಡ್ಡಿ: ಕ್ಯಾಸ್ಟಿಂಗ್ ಕೌಚ್ ಅನ್ನು ಅಸ್ತ್ರವನ್ನಾಗಿಸಿಕೊಂಡಿದ್ದು ಯಾಕೆ ಗೊತ್ತಾ?

ಅವಕಾಶಗಳಿಂದ ತಿರಸ್ಕಾರಕ್ಕೊಳಗಾದ ಶ್ರೀರೆಡ್ಡಿ

ಬೆಂಗಳೂರು, ಜು.23:  ನಟಿ ಶ್ರೀರೆಡ್ಡಿ ನಟನೆಯಿಂದ ಸುದ್ದಿಯಾಗುವುದಕ್ಕಿಂತ, ತೆಲುಗು ಚಿತ್ರರಂಗದಲ್ಲಿ ಬೇರುಬಿಟ್ಟಿರುವ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾದರು. ಚಿತ್ರರಂಗದ ಗಣ್ಯರ ಹೆಸರನ್ನು ಬಹಿರಂಗವಾಗಿಯೇ ಹೇಳುವ ಮೂಲಕ ಎಲ್ಲರ ಹುಬ್ಬು ಮೇಲೆರುವಂತೆ ಮಾಡಿದ ನಟಿ, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹೈದ್ರಾಬಾದ್ ನ ತೆಲುಗು ಫಿಲಂಚೇಂಬರ್ ಬಳಿ ಅರೆನಗ್ನರಾಗಿ ಪ್ರತಿಭಟನೆಗೆ ಕುಳಿತರು.ಅಷ್ಟೇ ಅಲ್ಲದೆ ಕೊನಾ ವೆಂಕಟ್, ವೆಂಕಡಪ್ಪಾ ರಾವ್, ಅಭಿರಾಮ್ ದಗ್ಗುಬಾಟಿ ಸೇರಿದಂತೆ ಹಲವು ಪ್ರಮುಖರ ಹೆಸರನ್ನು ಬಹಿರಂಗವಾಗಿ ಹೇಳುವ ಮೂಲಕ ತಾನು ಅವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಗಿ ಹೇಳಿ ಮುಜುಗರವನ್ನುಂಟು ಮಾಡಿದ್ದರು.

ನನ್ನ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ಈ ಕೆಲಸವನ್ನು ಮಾಡಬೇಕಾಯಿತು

ಕ್ಯಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿದ ಶ್ರೀರೆಡ್ಡಿ, ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯವನ್ನು ಒಪ್ಪಿ, ಕೆಲವರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾದರೂ ಯಾಕೆ ಎಂಬ ಪ್ರಶ್ನೆ ಇದೀಗ ಕಾಡಿದೆ. ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಆಕೆ, ನೀವು ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುತ್ತೀರಾ, ಆದರೂ ಯಾಕೆ ಕೆಲವರೊಂದಿಗೆ ಹಾಸಿಗೆ ಹಂಚಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಆಕೆ, ನಟಿಯಾಗಬೇಕು ಎಂಬ ನನ್ನ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ನಾನು ಈ ಕೆಲಸವನ್ನು ಮಾಡಬೇಕಾಯಿತು ಎಂದಿದ್ದಾರೆ.

10 ವರ್ಷಗಳಿಂದ ನಾನು ನನ್ನ ಕುಟುಂಬದಿಂದ ದೊರವಿದ್ದೆ.

ಕಳೆದ 10 ವರ್ಷಗಳಿಂದ ಕುಟುಂಬದಿಂದ ಬೇರೆಯಾಗಿ ತಾನು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದೇನೆ. ಒಬ್ಬ ಹುಡುಗಿಗೆ ಸರಿಯಾದ ಕೆಲಸವಿಲ್ಲದೆ ಇದೆಲ್ಲವನ್ನೂ ನಿರ್ವಹಿಸಿಕೊಳ್ಳುವುದು ಕಷ್ಟದ ಕೆಲಸ. ಆಕೆಯ ಎಲ್ಲಾ ಖರ್ಚು ವೆಚ್ಚವನ್ನು ಆಕೆಯೆ ಭರಿಸುವುದು ಕಷ್ಟ. ಎಮ್ ಎಎ ಏಕಾಏಕಿ ಆಕೆಯನ್ನು ಬ್ಯಾನ್ ಮಾಡಿದ್ದರಿಂದ, ತಾನು ಜೀವನ ನಡೆಸುವುದಕ್ಕಾಗಿ ಸೆಲೆಬ್ರಿಟಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸಿದ್ದ ಎಂದು ಹೇಳಿದ್ದೇನೆ ಎಂದು ಆಕೆ ವಿವರಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲೂ ಮಾಹಿತಿ ಹಂಚಿಕೊಂಡಿದ್ದ ಶ್ರೀರೆಡ್ಡಿ, ನಾನು ಕೆಲವೇ ಕೆಲವು ಮಂದಿ ಸೆಲೆಬ್ರಿಟಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸಿದ್ದ ಎಂದಿದ್ದರು. ಅಲ್ಲದೆ ನಿರ್ಮಾಪಕರು ಹಾಗೂ ನಿರ್ದೇಶಕರು, ಇಂಡಸ್ಟ್ರೀಗೆ ಬರುವ ಹೊಸ ತಾರೆಯರನ್ನು ಯಾವ ರೀತಿ ಮಿಸ್ ಯೂಸ್ ಮಾಡಿಕೊಳ್ಳುತ್ತಾರೆ ಎಂಬ ಸತ್ಯವನ್ನು ಕೂಡ ಬಾಯಿಬಿಟ್ಟಿದ್ದರು.

Tags