ಸುದ್ದಿಗಳು

ಸವ್ಯಸಾಚಿಯಾದ ಟಾಲಿವುಡ್ ಸ್ಟಾರ್ ನಾಗಚೈತನ್ಯ!

ಟಾಲಿವುಡ್ ನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಾಗಚೈತನ್ಯರವರು ಇತ್ತೀಚಿನ ದಿನಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳಿಂದ ಮಿಂಚುತ್ತಿದ್ದು ತೆಲುಗು ಚಿತ್ರ ರಂಗದಲ್ಲಿ ಸ್ಟಾರ್ ನಟರಾಗಿ ಖ್ಯಾತಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಇತ್ತಿಚೆಗೆ ದಕ್ಷಿಣ ಭಾರತದ ಬ್ಯೂಟಿ ಕ್ವೀನ್ ಸಮಂತ ಅವರನ್ನು ವರಿಸುವುದರ ಮೂಲಕ ತಮ್ಮ ವೈವಾಹಿಕ ಜೀವನವನ್ನು ಜಾಲಿ ಟ್ರಿಪ್ ಗಳೊಂದಿಗೆ ಕಾಲ ಕಳೆಯುತ್ತಿದ್ದು ಸಿನಿಮಾರಂಗದಿಂದ ಕೊಂಚ ರಿಲೀಫ್ ತೆಗೆದು ಕೊಂಡಿದ್ದರು ಎಂದು ಸುದ್ದಿಯಾಗಿತ್ತು.

ಪ್ರಸ್ತುತ ವಿಷಯವೇನೆಂದರೆ ಈ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ನೂತನ ಚಿತ್ರವೊಂದರಲ್ಲಿ ವಿಶೇಷ ಪಾತ್ರದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟಾಲಿವುಡ್ ನಲ್ಲಿ  ಬಾರೀ ಸುದ್ದಿಯಾಗಿದೆ.

ಸವ್ಯಸಾಚಿ ಅನ್ನೋ ಶೀರ್ಷಿಕೆಯೊಂದಿಗೆ ತಾರಕ್ಕೇರುತ್ತಿರುವ ಈ ಚಿತ್ರ  ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ಸ್ ಅಡಿಯಲ್ಲಿ ತೆರೆ ಕಾಣಲಿದೆ. ಈ ಚಿತ್ರಕ್ಕೆ ಚಂದೂ ಮಂಡೋಟಿ ಯವರು ಯಾಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದು ವಿಶೇಷ.

ಈ ಚಿತ್ರವು ಲವ್ ,ರೊಮ್ಯಾಂಟಿಕ್, ಯಾಕ್ಷನ್ ಥ್ರಿಲ್ಲರ್ ಕಥೆಯ ಹಿನ್ನಲೆಯಲ್ಲಿ ಕಥೆ ಹೆಣೆಯಲಾಗಿದ್ದು ಈ ಚಿತ್ರಕ್ಕೆ ಟಾಲಿವುಡ್ ಹಿರಿಯ ಸಂಗೀತ ನಿರ್ದೇಶಕ  ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರಂತೆ .

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಿಧಿ ಅಗರ್ವಾಲ್ , ಭಾರತೀಯ ಚಿತ್ರರಂಗದ ಖ್ಯಾತ ನಟ ಆರ್.ಮಾಧವನ್ , ರಾವ್ ರಮೇಶ್ , ವೆನ್ನೆಲ ಕಿಶೋರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ ಬರುವ ಜೂನ್ 14 ಕ್ಕೆ ಸಿನಿಮಾ ತೆರೆಕಾಣಲಿದೆ.

 

 

 

Tags