ಸುದ್ದಿಗಳು

ನಾಗಚೈತನ್ಯ ಹಾಗೂ ವೆಂಕಟೇಶ್ ಜೊತೆಗೆ ಸಿನಿಮಾ ಮಾಡಲಿದ್ದಾರಂತೆ !

ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಹಾಗೂ ವಿಕ್ಟರಿ ವೆಂಕಟೇಶ್‌‌ ಇಬ್ಬರಿಗೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇವರ ಸಿನಿಮಾಗಳು ಅಂದ್ರೆ ಏನಾದ್ರು ಒಂದು ಸ್ಪೆಷಲ್ ಇದ್ದೇ ಇರುತ್ತೆ. ಇದೀಗ ಈ ಜೋಡಿ ಮತ್ತೆ ಒಂದಾಗಲಿದೆ.

ಚಂದು ಮುಂಡೇಟಿ ನಿರ್ದೇಶನದ ‘ಪ್ರೇಮಮ್’ ಸಿನಿಮಾದಲ್ಲಿ ಚಿಕ್ಕ ದೃಶ್ಯವೊಂದರಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರೂ  ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಮಾವ ಹಾಗೂ ಅಳಿಯನ ಸಂಬಂಧದ ಸುತ್ತ ಚಿತ್ರಕಥೆಯನ್ನು ಹೆಣೆಯಲಾಗಿದೆಯಂತೆ.

ಜೈ ಲವಕುಶ ಚಿತ್ರಕ್ಕೆ ಸಂಗೀತ ನೀಡಿದ್ದ ಕೆ.ಎಸ್‌. ರವೀಂದ್ರ ಬೊಬ್ಬಿ ಈ ಸಿನಿಮಾಗೆ ಕೂಡಾ ಸಂಗೀತ ನೀಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುರೇಶ್ ಪ್ರೊಡಕ್ಷನ್ ಒಟ್ಟಿಗೆ ಸೇರಿ ಈ ಸಿನಿಮಾ ನಿರ್ಮಿಸುತ್ತಿದೆ.

ಸದ್ಯ ಚಿತ್ರತಂಡ ಸದ್ಯಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಸದ್ಯಕ್ಕೆ ವಿಕ್ಟರಿ ವೆಂಕಟೇಶ್ F2 ಸಿನಿಮಾ, ನಾಗ ಚೈತನ್ಯ ಸವ್ಯಸಾಚಿ ಹಾಗೂ ಶೈಲಜಾ ರೆಡ್ಡಿ ಅಲ್ಲುಡು ಸಿನಿಮಾ ಶೂಟಿಂಗ್‌‌ ನಲ್ಲಿ ಬ್ಯುಸಿಯಿದ್ದು ಆ ಸಿನಿಮಾಗಳು ಮುಗಿದ ಕೂಡಲೇ ಈ ಹೊಸ ಸಿನಿಮಾದಲ್ಲಿ ಇಬ್ಬರೂ ನಟಿಸಲಿದ್ದಾರೆ ಎನ್ನಲಾಗಿದೆ.

Tags