ಸುದ್ದಿಗಳು

ಸಮಂತ ಮದುವೆ ಟೀಸರ್ ವೈರಲ್ !

ಈಗ ಬೆಡಗಿ ಸಮಂತಾ, ಅಕ್ಕಿನೇನಿ ನಾಗಾರ್ಜುನರ ಮಗ ಅಕ್ಕಿನೇನಿ ನಾಗಚೈತನ್ಯರ ಮದುವೆಯಾಗಿ 8 ತಿಂಗಳೇ  ಕಳೆದಿವೆ. ಕಳೆದ ಅಕ್ಟೋಬರ್ ​ನಲ್ಲಿ ಮದುವೆಯಾಗಿದ್ದ ಈ ಜೋಡಿಯ ಶಾದಿ ಈವೆಂಟ್​, ಸಿನಿರಂಗದಲ್ಲೆ ಅದ್ಧೂರಿ ಕಾರ್ಯಕ್ರಮ ಎನಿಸಿಕೊಂಡಿತ್ತು.

ಅತಿರಥ ಮಹಾರಥ ನಟರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತಷ್ಟೆ ಅಲ್ಲದೆ ಆ ಟೈಂನಲ್ಲಿ ಅದೆ ದೊಡ್ಡ ಟ್ರೆಂಡಿಂಗ್​ ನ್ಯೂಸ್​ ಕೂಡ ಆಗಿತ್ತು. ಇದೀಗ ಇಬ್ಬರ ಮದುವೆ ಮುಗಿದು 8 ತಿಂಗಳು ಕಳೆದಿದೆ. ಸಮಂತಾ ಕೂಡ ನಟನೆ ಹಾಗು ಸಂಸಾರ ಎರಡನ್ನೂ ತೂಗಿಸಿಕೊಂಡು ಸಿನಿರಂಗದಲ್ಲಿ ತನ್ನದೇ ಚಾಪು ಮೂಡಿಸ್ತಿದ್ದಾಳೆ.

ಇದೆಲ್ಲದರ ನಡುವೆ ಇದೀಗ ತನ್ನ ಫ್ಯಾನ್ಸ್​ ಗೆ ಸಮಂತಾ ನ್ಯೂಸ್​ ವೊಂದನ್ನ ಕೊಟ್ಟಿದ್ದು, ತಮ್ಮ ಮದುವೆಯ ಟೀಸರ್ ​ವೊಂದನ್ನ ಇನ್ ​ಸ್ಟ್ರಾಗ್ರಾಮ್ ​ನಲ್ಲಿ ಹಾಕಿದ್ದಾಳೆ. ಸದ್ಯ ಒಂದು ನಿಮಿಷದ ಈ ಟೀಸರ್​ ಸಖತ್​ ವೈರಲ್​ ಆಗ್ತಿದೆ.

ತಾರಜೋಡಿಗಳ ಮ್ಯಾರೇಜ್​ ಈವೆಂಟ್ ಶೂಟಿಂಗ್​ ಎಕ್ಸ್ ​ಪರ್ಟ್​ ಅಂತಾನೇ ಫೇಮಸ್​ ಆಗಿರೋ ಜೋಸೇಫ್​ ರಾಧಿಕ್​ ಟೀಂನ ಎಫೆರ್ಟ್​ನೊಂದಿಗೆ ಟೀಸರ್​ ರೂಪದ ವಿಡಿಯೋ ರೆಡಿಮಾಡಲಾಗಿದೆ. ಇದರಲ್ಲಿ ಚೇಸ್ಯಾಮ್​ ಜೋಡಿಯ ಅಮೂಲ್ಯ ಕ್ಷಣಗಳನ್ನ ತೋರಿಸಲಾಗಿದೆ.

Tags