ಸುದ್ದಿಗಳು

ನಾಳೆ ಕರ್ನಾಟಕ ರಾಜ್ಯೋತ್ಸವ: ಅಪ್ಪು, ಯಶ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ    

ನವೆಂಬರ್ 1… ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದುಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ.ಹೀಗಾಗಿ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಹೀಗೆ ಒಂದು ಕಡೆ ನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಮತ್ತೊಂದೆಡೆ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಯಶ್ ಅವರುಗಳ ಕಡೆಯಿಂದಲೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಪುನೀತ್ ರಾಜ್ ಕುಮಾರ್ ನಟಿಸಿರುವ ‘ರಾಜಕುಮಾರ’ ಹಾಗೂ ಯಶ್ ನಟನೆಯ ‘ಕೆಜಿಎಫ್ ಚಾಫ್ಟರ್-1’ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಮರು ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ‘ಕೆಜಿಎಫ್’ ಬಿಡುಗಡೆಗೊಳ್ಳುವ ಬೆಂಗಳೂರಿನ ಊರ್ವಶಿ ಚಿತ್ರಮಂದಿರವು ಟಿಕೆಟ್ ದರವನ್ನು 50, 40 ಹಾಗೂ 30 ರೂಪಾಯಿಗಳನ್ನು ನಿಗಧಿಗೊಳಿಸಿದೆ.

ಈ ಎರಡು ಚಿತ್ರಗಳು ಸೂಪರ್ ಹಿಟ್ ಸಿನಿಮಾಗಳಾಗಿದ್ದು, ಈ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ ನಿರ್ಮಿಸಿದೆ. ಸದ್ಯ ಈ ಸಂಸ್ಥೆಯು ಯಶ್ ನಟನೆಯಲ್ಲಿ ‘ಕೆಜಿಎಫ್ ಚಾಫ್ಟರ್-2’ ಹಾಗೂ ಪುನೀತ್ ನಟನೆಯಲ್ಲಿ ‘ಯುವರತ್ನ’ ಚಿತ್ರಗಳನ್ನು ನಿರ್ಮಿಸುತ್ತಿದೆ.

ನವಜಾತ ಶಿಶುವಿನ ವಿಡಿಯೋ ವೈರಲ್: ಕನ್ ಫ್ಯೂಸ್ ಆದ ಯಶ್ ಅಭಿಮಾನಿಗಳು!

#Sandalwood #Yash #PunithRajKumar  #Rajkumar #KGF #FilmNews #KannadaSuddigalu

Tags