ಸುದ್ದಿಗಳು

ನಾಳೆ ‘ನಮ್ಗೇನ್ ಬೆಲೆನೇ ಇಲ್ವಾ..?’ ನಾಟಕದ ಪ್ರದರ್ಶನ

‘ಪಯಣ’ ರಂಗ ತಂಡವು ಪ್ರಸ್ತುತ ಪಡಿಸುವ ‘ನಮ್ಗೇನ್ ಬೆಲೆನೇ ಇಲ್ವಾ..?’ ನಾಟಕದ ಪ್ರದರ್ಶನ ನಾಳೆ ಸಂಜೆ ಕೆ.ಎಚ್ ಕಲಾಸೌಧದಲ್ಲಿ ನಡೆಯಲಿದೆ. ಈ ನಾಟಕವು ಕಾಂಕ್ರಿಟ್ ನಾಡಿನ IT ಯುವಕನ ತ್ರಿಶಂಕು ಪರಿಸ್ಥಿಯನ್ನು ಮತ್ತು ಗಂಡ ಹೆಂಡಿತಿಯ ಸಂಸಾರದ ಕಥೆಯನ್ನು ಕಾಮಿಡಿ ರೂಪದಲ್ಲಿ ತೋರಿಸಲಿದೆ.

ಜೀವನದಲ್ಲಿ ಕೂಡಿಟ್ಟ ಹಣವೋ, ಮತ್ತೊಬ್ಬರ ಋಣವೋ, ಕಾಪಾಡಿದ ಅಂತಸ್ತೋ, ಸಂಪಾದಿಸಿದ ಬಾಂಧವ್ಯವೋ ಅಥವಾ ಪಡೆದುಕೊಂಡ ಪ್ರೀತಿಯೋ ಇಂಥಹ ಗೊಂದಲಗಳ ಗೊಂಚಲಿನಲ್ಲಿ ಚಿಗುರಿದಂತಹ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ.

ಪ್ರೀತಿಸಿ ಮದುವೆಯಾದ ಪ್ರೇಮಿಗಳ ಮೊದಲ ರಾತ್ರಿ ನಡೆಯುತ್ತದೆಯೋ ಇಲ್ಲವೋ ಎಂಬುದು ಒಂದು ಕಥೆ. ಭಗ್ನಪ್ರೇಮಿಯೊಬ್ಬ ಸಾಯಲು ಬಂದಾಗ ಅಲ್ಲಿ ಹುಡುಗಿ ಪರಿಚಯವಾಗಿ ಅವನ ಮನಸ್ಸನ್ನು ಪರಿವರ್ತನೆ ಮಾಡುವ ಬಗೆ.. ಹೀಗೆ ಈ ನಾಟಕವು ಮುಂದುವರಿಯುತ್ತದೆ.

ವಿವರಗಳು

ನಾಟಕ: ನಮ್ಗೇನ್ ಬೆಲೆನೇ ಇಲ್ವಾ…!

ಕಲಾವಿದರು: ಮನೋಜ್, ಸಾಗರ್, ವರ್ಷಿಣಿ, ಶೀತಲ್, ಅಶ್ವರಾಜ್ ಸಾಯಿಕುಮಾರ್ ಹಾಗೂ ಇತರರು

ನಿರ್ದೇಶನ: ಅರುಣ್ ಸೂರ್ಯ ಎಂ

ಸ್ಥಳ: ಕೆ.ಎಚ್ ಕಲಾಸೌಧ ಬೆಂಗಳೂರು

ದಿನಾಂಕ: 10/11/2019 ಸಂಜೆ 07:30 ಕ್ಕೆ

ಪ್ರವೇಶ ದರ: ರೂ 100/-.

ಬುಕ್ ಮೈ ಶೋ ಆ್ಯಪ್ ನಲ್ಲೂ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದು

‘Always ನಾನು ಪಾಸಿಟಿವ್’ ಎಂದ ‘ರಂಗನಾಯಕಿ’ ಅದಿತಿ ಪ್ರಭುದೇವ

#NamgenBeleneIlwa #NamgenBeleneIlwaDrama #DramaShow #Payana

Tags