ಸುದ್ದಿಗಳು

ನಾಳೆ ಕನ್ನಡ ಮತ್ತು ತೆಲುಗಿನಲ್ಲಿ ತಾನ್ಯಾ ಹೋಪ್ ಹವಾ…!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರೊಂದಿಗೆ ‘ಬಸಣ್ಣಿ ಬಾ ಬಸಣ್ಣಿ ಬಾ…’ ಹಾಡಿಗೆ ಕುಣಿದಿದ್ದ ತಾನ್ಯಾ ಹೋಪ್ ಇದೀಗ ಡಬಲ್ ಸಂಭ್ರಮದಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗಿರುವ  ಅವರು ನಾಳೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಡಬಲ್ ಧಮಾಕಾ ದೃಷ್ಟಿಸಲಿದ್ದಾರೆ.

ಹೌದು, ನಾಳೆ (ಜ.24) ತಾನ್ಯಾ ನಟನೆಯ ಎರಡು ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿವೆ. ಕನ್ನಡದಲ್ಲಿ ‘ಖಾಕಿ’ ಚಿತ್ರ ಬಿಡುಗಡೆ ಆಗುತ್ತಿದ್ದರೆ, ತೆಲುಗಿನಲ್ಲಿ ‘ಡಿಸ್ಕೋ ರಾಜಾ’ ರಿಲೀಸ್ ಆಗುತ್ತಿದೆ. ಹೀಗಾಗಿ ನಾಳೆ ಅವರ ಸಿನಿಮಾ ಬದುಕು ವಿಶೇಷವಾಗಿರಲಿದೆ.

2020 ರ ಆರಂಭದಲ್ಲಿಯೇ ತಾನ್ಯಾ ಡಬಲ್ ಧಮಾಕಾ ಖುಷಿಯಲ್ಲಿದ್ದು, 2 ಚಿತ್ರಗಳ ಬಗ್ಗೆ ಸಾಕಷ್ಟು ಭರವಸೆಯನ್ನು ಹೊಂದಿದ್ದಾರೆ. ಸದ್ಯ ತಮಿಳಿನಲ್ಲಿ ‘ಧಾರಾಳ ಪ್ರಭು’ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು, ಕನ್ನಡದಲ್ಲಿ ‘ಯಜಮಾನ’, ‘ಉದ್ಘರ್ಷ’, ‘ಅಮರ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ಮದುವೆಯಾಗುವ ಹುಡುಗಿ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ್

#DoubleCelebration #TanyaHope   #TanyaHopeMovies,  #KannadaSuddigalu  #KannadaMovies

Tags