ಆರೋಗ್ಯಜೀವನ ಶೈಲಿಸುದ್ದಿಗಳು

ಬಾಯಿ ಹುಣ್ಣಿಗೆ ದಿವ್ಯೌಷಧಿ ತೊಂಡೆಕಾಯಿ ಎಲೆ..

ತೊಂಡೆಕಾಯಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ..

ಕಜ್ಜಿಯಂತಹವು ನಿವಾರಣೆಯಾಗಲು ಇದು ಬಹಳಷ್ಟು ಸಹಕಾರಿ..

ತೊಂಡೆಕಾಯಿ ಸದಾ ಲಭ್ಯವಿರುವ ತರಕಾರಿ. ಪಲ್ಯ, ಸಾರು ಮಾಡಿಕೊಂಡು ತಿನ್ನಬಹುದಾದ ಕಾಯಿಪಲ್ಯೆ ಇದು. ಇದಿಷ್ಟೇ ಅಲ್ಲದೆ ತೊಂಡೆಕಾಯಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಮುಖ್ಯವಾಗಿ ಒಣ ಚರ್ಮ ಮೃದುವಾಗಲು, ಗಂದೆಗಳು, ಕಜ್ಜಿಯಂತಹವು ನಿವಾರಣೆಯಾಗಲು ಇದು ಬಹಳಷ್ಟು ಸಹಕಾರಿ. ತೊಂಡೆಕಾಯಿ ಮತ್ತು ಅದರ ಎಲೆಗಳಿಂದ ಮಾಡಿಕೊಳ್ಳಬಹುದಾದ ಮನೆಮದ್ದುಗಳನ್ನು ಒಮ್ಮೆ ನೋಡೋಣ ಬನ್ನಿ.

* ತೊಂಡೆಕಾಯಿ ಎಲೆ ರಸವನ್ನು ನೀರಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

* ಪ್ರತಿದಿನ 2 ಹಸಿ ತೊಂಡೆಕಾಯಿ ಸೇವಿಸಿದರೆ ಒಣಗಿದ ಚರ್ಮ ಮೃದುವಾಗುತ್ತದೆ.

* ದೇಹದಲ್ಲಿ ಗಂದೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಪೇಸ್ಟ್‌ ಮಾಡಿ ಆ ಜಾಗಕ್ಕೆ ಲೇಪ ಮಾಡಿದರೆ ಗಂದೆಗಳು ಶಮನವಾಗುತ್ತವೆ.

* ಕಣ್ಣುಗಳು ಉರಿಯುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವವರೆಗೆ ಚೆನ್ನಾಗಿ ಕುದಿಸಿ. ಆ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣುರಿ ನಿವಾರಣೆಯಾಗುತ್ತದೆ.

* ಎರಡು ಚಮಚ ತೊಂಡೆ ಗಿಡದ ಕಾಂಡದ ಪುಟಿಯನ್ನು ಒಂದು ಕಪ್‌ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸಿದರೆ ದೇಹದ ಬೊಜ್ಜು ಕರಗುತ್ತದೆ.

* ಸಂಧಿಗಳಲ್ಲಿ ಊತ ಇದ್ದರೆ, ತೊಂಡೆ ಗಿಡದ ಎಲೆಗಳನ್ನು ಬೇವಿನ ಎಣ್ಣೆಯಲ್ಲಿ ಬಾಡಿಸಿ ಪೇಸ್ಟ್‌ ಮಾಡಿ ಊತ ಇರುವ ಜಾಗದಲ್ಲಿ ಲೇಪ ಮಾಡಿದರೆ ಊತ ಕಡಿಮೆಯಾಗುತ್ತದೆ.

* ಎರಡು ಚಮಚ ತೊಂಡೆ ಎಲೆಯ ರಸಕ್ಕೆ ಅರ್ಧಕಪ್‌ ಮೊಸರು ಸೇರಿಸಿ ದಿನ 2 ರಿಂದ 3 ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ.

* ತೊಂಡೆಕಾಯಿ ಎಲೆಗಳನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಶಮನವಾಗುತ್ತದೆ.

* ತೊಂಡೆಕಾಯಿ ಎಲೆಗಳ ರಸವನ್ನು ಎಳ್ಳೆಣ್ಣೆ ಜೊತೆ ಕುದಿಸಿ ಎಣ್ಣೆ ತಯಾರಿಸಿ ಚರ್ಮದ ಮೇಲೆ ಹಚ್ಚಿದರೆ ಚರ್ಮದ ಕಾಯಿಲೆ ನಿವಾರಣೆಯಾಗುತ್ತದೆ.

Tags