ಸುದ್ದಿಗಳು

ನರೇಂದ್ರ ಮೋದಿ ಬಯೋಪಿಕ್ ಗಾಗಿ ರೈಲು ದ್ವಂಸ..!!?!!

ಮುಂಬೈ, ಮಾ.05:

ಸದ್ಯ ಬಹಳಷ್ಟು ಜನನಾಯಕರ, ರಾಜಕಾರಿಣಿಗಳ, ಸಾಹಸಿಗಳ ಬಯೋಪಿಕ್ ಸಿನಿಮಾಗಳು ತೆರೆ ಕಾಣುತ್ತಿವೆ. ಅಷ್ಟೇ ಅಲ್ಲ ಈ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಕೂಡ ಇದೆ. ಇತ್ತೀಚೆಗೆ ಮನ್ ಮೋಹನ್ ಸಿಂಗ್ ಅವರ ಬಯೋಪಿಕ್ ಸಿನಿಮಾ ಕೂಡ ತೆರೆ ಕಂಡು ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮೋದಿ ಬಯೋಪಿಕ್ ಸಿನಿಮಾ ಕೂಡ ಚಿತ್ರೀಕರಣಗೊಳ್ಳುತ್ತಿದೆ. ಈ ಸಿನಿಮಾಗೆ ಅನೇಕರು ಕಾಯುತ್ತಿದ್ದಾರೆ.

ರೈಲಿಗೆ ಬೆಂಕಿ..?

ಹೌದು, ಇತ್ತೀಚೆಗೆ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ಚಿತ್ರೀಕರಣ ಮುಂದುವರೆದಿತ್ತು. ಈ ಬೆನ್ನಲ್ಲೇ ಇವರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನೈಜ ಚಿತ್ರೀಕರಣ ಮಾಡುವುದಕ್ಕೆ ಮುಂದಾಗಿತ್ತು ಚಿತ್ರತಂಡ. ಗೋದ್ರಾದಲ್ಲಿ ಸಬರಮತಿ ರೈಲಿಗೆ ಬೆಂಕಿ ಬಿದ್ದು ಎಷ್ಟೋ ಮಂದಿ ಸಜೀವ ದಹನವಾಗಿದ್ದರು. ಈ ಚಿತ್ರೀಕರಣಕ್ಕಾಗಿ ಚಿತ್ರತಂಡ ರೈಲೊಂದಕ್ಕೆ ಬೆಂಕಿ ಹಾಕಿದೆ. ಈ ಬೆಂಕಿಯಿಂದ ಗಾಡ ಹೊಗೆ ಆವರಿಸಿದ್ದರಿಂದ ಅಲ್ಲಿನ ಸ್ಥಳೀಯರು ಭಯಬೀತಗೊಂಡಿದ್ದಾರೆ.

ಡಮ್ಮಿ ರೈಲು ಬಳಕೆ..?

ಇನ್ನು ಈ ವಿಚಾರವಾಗಿ ಬಹಳಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲ ಈ ವಿಚಾರವಾಗಿ ರೈಲ್ವೆ ಇಲಾಖೆ ಕೂಡ ಸ್ಪಷ್ಟನೆ ನೀಡಿದೆಯಂತೆ. ಮೋಕ್ ಡ್ರಿಲ್ ಬೋಗಿಯನ್ನು ಚಿತ್ರೀಕರಣಕ್ಕೆ ನೀಡಲಾಗಿತ್ತು. ಈ ವೇಳೆ ನಮ್ಮ ಅಧಿಕಾರಿಗಳು ಕೂಡ ಇದ್ದರು ಎಂದಿರುವುದು ವರದಿಯಾಗಿವೆ. ಸದ್ಯ ಈ ಘಟನೆ ಬಹಳಷ್ಟು ವಿರೋಧಕ್ಕೆ ಕಾರಣವಾಗಿದೆ.

 

ಸುಕುಮಾರ್ ಜೊತೆ ಚಿತ್ರ ಮಾಡಲ್ಲ ಎಂದ ಪ್ರಿನ್ಸ್!!

#balkaninews #train #trainfire #narendramodi #narendramodibiopic #narendramoditwitter #narendramodiinstagram

Tags