ಸುದ್ದಿಗಳು

ನಾಳೆ ‘ತಾರಕಾಸುರ’ನ ಆಡಿಯೋ ಆರ್ಭಟ..

‘ಕನ್ನಡ ಕಲಿಯೋ’ ಹಾಡು

ಬೆಂಗಳೂರು,11: ಓಂ ಬಾಲಾಜಿ ಎಂಟರ್ಟೈನರ್ಸ್ ಬ್ಯಾನರ್ಸ್ ನ ಅಡಿಯಲ್ಲಿ ನಿರ್ಮಾಣವಾಗಿರುವ ‘ತಾರಕಾಸುರ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದುಕೊಂಡ ಮೇಲೆ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.

ಆಡಿಯೋ ಬಿಡುಗಡೆ

ಇನ್ನು ನಾಳೆ ಅಂದರೆ ಅ.12 ಶುಕ್ರವಾರ ಈ ಚಿತ್ರದ ಆಡಿಯೋ ಬಿಡುಗಡೆ ಸಂಜೆ 6.30ಕ್ಕೆ ಕಲಾವಿದರ  ಸಂಘ ಚಾಮರಾಜ ಪೇಟೆ, ಬೆಂಗಳೂರಿನಲ್ಲಿ ನಡೆಯಲಿದೆ. ಸರ್ವರಿಗೂ ಸ್ವಾಗತವನ್ನು ಕೋರಿದೆ ಚಿತ್ರತಂಡ..

ಉದಯೋನ್ಮುಖ ನಟ

ಈ ಹಿಂದೆ ಶ್ರೀ ಮುರುಳಿ, ರಚಿತಾ ರಾಮ್ ಅಭಿನಯಿಸಿದ್ದ ಯಶಸ್ವಿ ‘ರಥಾವರ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ, ‘ತಾರಕಾಸುರ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ, ನಿರ್ಮಾಪಕ ನರಸಿಂಹಲು ಅವರ ಮಗ, ವೈಭವ್ ಎಂಬ ಉದಯೋನ್ಮುಖ ನಾಯಕ ನಟ ಪರಿಚಯವಾಗುತ್ತಿದ್ದು, ಅವರಿಗೆ ಜೋಡಿಯಾಗಿ ‘ಟಗರು’ ಪುಟ್ಟಿ ಮಾನ್ವಿತಾ ಅಭಿನಯಿಸಿದ್ದಾರೆ.

ಹಿಂದಿ ಡಬ್ಬಿಂಗ್ ಹಕ್ಕು

ಈಗಾಗಲೇ ‘ತಾರಕಾಸುರ’ ಚಿತ್ರವು, ವಿಭಿನ್ನ ಪೋಸ್ಟರ್ , ಟೀಸರ್ ಹಾಗೂ ಶಿವಣ್ಣ ಹಾಡಿರುವ ‘ಕನ್ನಡ ಕಲಿಯೋ’ ಹಾಡಿನ ಮೂಲಕ ಗಮನ ಸೆಳೆದಿದೆ. ಚಿತ್ರದ ಮೂಲಕ ಹಾಲಿವುಡ್ ನ ಡ್ಯಾನಿ ಸಫಾನಿ ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಇನ್ನು ಬಿಡುಗಡೆಗೂ ಮುನ್ನವೇ ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಒಳ್ಳೆ ಬೆಲೆಗೆ ಮಾರಾಟವಾಗಿವೆ.

ಇನ್ನು ಈ ಚಿತ್ರದಲ್ಲಿ ವೈಭವ, ಮಾನ್ವಿತಾರೊಂದಿಗೆ ಸಾಧುಕೋಕಿಲ, ಎಂ. ಕೆ ಮಠ, ಕರಿಸುಬ್ಬು ಸೇರಿದಂತೆ ಅನೇಕರ ತಾರಾಬಳಗವಿದೆ. ಚಿತ್ರಕ್ಕೆ ಕುಮಾರ್ ಗೌಡ ಕ್ಯಾಮೆರಾ, ಕೆ.ಎಂ.ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಮತ್ತು ಜಾಲಿಬಾಸ್ಟಿನ್ ಸಾಹಸ ನಿರ್ದೇಶನವಿದ್ದು, ಧರ್ಮ ವಿಶ್ ಸಂಗೀತ ನೀಡಿದ್ದಾರೆ.

 

Tags