ಸುದ್ದಿಗಳು

‘ತ್ರಯಂಬಕಂ’ ಪ್ರೀಮಿಯರ್ ಶೋ!!

ಬೆಂಗಳೂರು,ಏ.15: ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿರುವ ‘ತ್ರಯಂಬಕಂ’ಚಿತ್ರದ ಪ್ರೀಮಿಯರ್ ಶೋ ೧೬ ಕ್ಕೆ ಆಯೋಜನೆ ಮಾಡಲಾಗಿದೆ.

ಆ ಕರಾಳ ರಾತ್ರಿ, ಪುಟ ೧೦೯ ಚಿತ್ರಗಳ ನಂತರ ನಿರ್ದೇಶಕ ದಯಾಳ್ ಪದ್ಮನಾಭನ್ ಸದ್ಯ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ರೆಡಿಯಾಗಿದೆ. ಇನ್ನು ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋ ಆಯೋಜನೆ ಮಾಡಿದೆ ಚಿತ್ರ ತಂಡ.

ಜಿಟಿ ಮಾಲ್ನಲ್ಲಿ ಪ್ರೀಮಿಯರ್ ಶೋ

ಎಸ್ ೧೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ತ್ರಯಂಬಕಂ ಸಿನಿಮಾ ಮೊದಲ ಪ್ರದರ್ಶನ ಆಯೋಜನೆ ಮಾಡಿದೆ. ಜಿಟಿ ವರ್ಡ್ ಮಾಲ್‌ ನ ಎಸ್‌ಪಿಐ ನಲ್ಲಿ ಸಂಜೆ ೬.೩೦ಕ್ಕೆ ಮೊದಲ ಪ್ರದರ್ಶನ ಮಾಡುತ್ತಿದೆ ಈ ಚಿತ್ರ. ಇನ್ನು ಈ ಚಿತ್ರದ ಟ್ರೇಲರ್‌ನಲ್ಲಿಯೇ ಸಕ್ಕಯ್ ಕ್ಯುರಿಯಾಸಿಟಿ ಮೂಡಿಸಿತ್ತು. ಇನ್ನು ಇದು ಅಪ್ಪ, ಮಗಳ ಸೆಂಟಿಮೆಂಟ್ ಚಿತ್ರವಾಗಿದ್ದು, ನರಪಾಷಾಣ ಮತ್ತು ಇಲಿಪಾಷಾಣದ ಅಧ್ಯಯನ ಮಾಡಿ…

Image may contain: 3 people, people smiling, people standing

ದಯಾಳ್ ನಿರ್ದೇಶನದ ಚಿತ್ರ

ಇನ್ನು ಈ ಚಿತ್ರದಲ್ಲಿ ರಾಘವೇಂದ್ರರಾಜ್ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂದರೆ, ರೋಹಿತ್, ಅನುಮಪಮಾ ಗೌಡ, ಶ್ರುತಿನಾಯಕ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ರಾಘಣ್ಣ ಹಾಗೂ ದಯಾಳ್ ಪದ್ಮನಾಭ್ ಅವರ ಕಾಂಬಿನೇಷನ್ನ ಮೊದಲ ಚಿತ್ರ ಇದಾಗಿದ್ದು, ಟೈಟಲ್ನಿಂದಲೇ ಸದ್ದು ಮಾಡುತ್ತಿದೆ. ಬಿಡುಗಡೆಯಾದ ನಂತರ ಏನೆಲ್ಲಾ ಸ್ಪೆಷಲ್ ಇರುತ್ತೆ ಅಂತಾ ಕಾದು ನೋಡಬೇಕು.

ಜಾಹಿರಾತಿನಲ್ಲಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಳ್ಳಲಿರುವ ಸಾರಾ!!

#trayambakam #raghavendrarajkumar #sandalwood

Tags