ಸುದ್ದಿಗಳು

ನಾಳೆ ‘ಒಲೇಲೇ ಒಲೇಲೇ’ ಹಾಡು ರಿಲೀಸ್

ಈಗಾಗಲೇ ಪೋಸ್ಟರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ಸಿನಿಮಾ

ಬೆಂಗಳೂರು.ಮಾ.14: ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಭಕಂ’ ಸಿನಿಮಾ ಈಗಾಗಲೇ ಹಲವಾರು ಕಾರಣಗಳಿಂದ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಈ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ನಾಳೆ ಬೆಳಿಗ್ಗೆ 10 ಗಂಟೆಗೆ ಚಿತ್ರದ ‘ಒಲೇಲೇ ಒಲೇಲೇ’ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ.

ಈ ಹಾಡಿನ ದೃಶ್ಯಗಳ ಸ್ಟಿಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಹಾಡಿನ ಬಗ್ಗೆ ಕುತೂಹಲ ಮೂಡಿಸಿದೆ. ಈ ಹಾಡಿನಲ್ಲಿ ಅನುಪಮಾ ಗೌಡ ಹಾಗೂ ಆರ್ ಜೆ ರೋಹಿತ್ ಡ್ಯಾನ್ಸ್ ಮಾಡಿದ್ದಾರೆ.

ಚಿತ್ರದ ಬಗ್ಗೆ

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. 500 ವರ್ಷಗಳ ಹಿಂದಿನ ಮೈಥಾಲಾಜಿಕಲ್ ಹಾಗೂ ಪ್ರಸ್ತುತ ಕೆಲವು ಸನ್ನಿವೇಶಗಳನ್ನು ಬ್ಲೆಂಡ್ ಮಾಡಿ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿ ಮಾಡಲಾಗಿದೆ ಎನ್ನುವುದು ಟ್ರೇಲರ್ ಮೂಲಕ ಗೊತ್ತಾಗುತ್ತಿದೆ.

‘ತ್ರಯಂಬಕಂ’ ಎಂದರೆ ಮೂರು ಕಣ್ಣು ಉಳ್ಳವನು, ಶಿವ ಎಂದರ್ಥ. ಇಡೀ ಚಿತ್ರ ಒಂದು ಶಿವಲಿಂಗ ಮತ್ತು ಕೊಲೆಯ ಸುತ್ತ ನಡೆಯಲಿದ್ದು, ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಆ ಶೀರ್ಷಿಕೆಯನ್ನು ಅಂತಿಮ ಮಾಡಿದ್ದಾರೆ ನಿರ್ದೇಶಕ ದಯಾಳ್.

ಇದೊಂದು ತಂದೆ-ಮಗಳ ಬಾಂಧವ್ಯದ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಆರ್ ಜೆ ರೋಹಿತ್ ಡಿಟೆಕ್ಟಿವ್ ಆಗಿ, ಅನುಪಮ ಗೌಡ ಪತ್ರಕರ್ತೆಯಾಗಿ ಅಭಿನಯಿಸಿದ್ದು, ನಾಯಕಿಯ ತಂದೆಯಾಗಿ ರಾಘಣ್ಣ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶಿವಮಣಿ, ಸಿಹಿಕಹಿ ಚಂದ್ರು, ಸುಂದರ್, ಶೃತಿ ನಾಯಕ್, ತೃಪ್ತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ತಮಿಳು ಸಿನಿಮಾ ಗಿಟ್ಟಿಸಿಕೊಂಡ ರಶ್ಮಿಕಾ

#trayambakam, #songrelased, #balkaninews #dayalpradmanabhan, #kannadasuddigalu

Tags

Related Articles